ಯುಗಾದಿ ಹಬ್ಬದ ಶಾಪಿಂಗ್ ಸಂಭ್ರಮ ಜೋರು: ದುಬಾರಿ ಬೆಲೆಗಳ ನಡುವೆಯೂ ಭರ್ಜರಿ ವ್ಯಾಪಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಗಾದಿ ಹಬ್ಬದಂದು ಹೂವು ಹಣ್ಣು ಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಯುಗಾದಿ ಹಬ್ಬವು ಹಿಂದೂ ಹೊಸ ವರ್ಷದ ಅತಿ ದೊಡ್ಡ ಹಬ್ಬವಾಗಿದೆ. ಅಲ್ಲದೆ, ರುಚಿಕರವಾದ ಆಹಾರದೊಂದಿಗೆ ಬೇವು-ಬೆಲ್ಲವನ್ನು ಸವಿಯುವ ಹಬ್ಬ ಯುಗಾದಿ.

ದೇಶದೆಲ್ಲೆಡೆ ಚಾಂದ್ರಮಾನ ಯುಗಾದಿ ಹಬ್ಬದ ಸಂಭ್ರಮ ಶುರುವಾಗಿದೆ. ಏ.9 ರಂದು ಯುಗಾದಿ ಹಬ್ಬದಂದು ಎರಡು ದಿನ ಮುಂಚಿತವಾಗಿಯೇ ಹೊಸ ವರ್ಷದ ಆರಂಭವನ್ನು ಸ್ವಾಗತಿಸಲು ರಾಜ್ಯದ ಜನತೆ ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಖರೀದಿ ಭರಾಟೆ ಜೋರಾಗಿದೆ.

ಒಂದೆಡೆ ಅನಾವೃಷ್ಟಿ, ಮತ್ತೊಂದೆಡೆ ಅಕಾಲಿಕ ಮಳೆಯಿಂದಾಗಿ ಹೂವು, ಹಣ್ಣುಗಳ ಬೆಲೆ ದಿಢೀರ್ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದರೂ ಜನರು ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧರಾಗಿದ್ದಾರೆ. ಹೂವಿನ ಬೆಲೆ ಗಗನಕ್ಕೇರಿದೆ. ಕೆಲವು ಬೆಲೆಗಳ ವಿವರ:

ಮಲ್ಲಿಗೆ ಕೆ.ಜಿ – 400 ರಿಂದ 500 ರೂ.
ಸೇವಂತಿಗೆ ಕೆ.ಜಿ – 300 ರಿಂದ 350 ರೂ.
ಗುಲಾಬಿ ಕೆ.ಜಿ – 250 ರೂ.
ಚೆಂಡು ಹೂ ಕೆ.ಜಿ – 150 ರೂ.
ಕಾಕಡ ಕೆ.ಜಿ – 500 ರೂ.
ಕನಕಾಂಬರ ಕೆ.ಜಿ – 800 ರಿಂದ 1000 ರೂ .
ಸುಗಂದರಾಜ ಕೆ.ಜಿ- 300 ರೂ.
ತುಳಸಿ ಒಂದು ಮಾರಿಗೆ 100 ರೂ.
ಬೇವು – ಒಂದು ಕಟ್ಟಿಗೆ 20 ರಿಂದ 30 ರೂ.
ಮಾವಿನ ಎಲೆ -30 ರೂ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!