ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗದ ಆದಿ ಶುರುವಾಗೋ ಯುಗಾದಿ ಹಬ್ಬದ ಮಾರನೇ ದಿನ ಹೊಸ ತೊಡಕು ಹಬ್ಬ ಶುರು. ಇಂದಿನ ದಿನ ಕುಟುಂಬ ಸಮೇತರಾಗಿ ಮಾಂಸಾಹಾರ ಸೇವಿಸುವುದು ಸಂಪ್ರದಾಯವಾಗಿದೆ. ಹೊಸ ವರ್ಷ ಮತ್ತು ರಂಜಾನ್ ನಾಳೆ ಇರುವುದರಿಂದ ಕುರಿ ಮಾಂಸಕ್ಕೆ ಭಾರಿ ಬೇಡಿಕೆ ಶುರುವಾಗಿದೆ.
ನಿನ್ನೆ ಯುಗಾದಿ ಆಚರಿಸಿ, ದೇವರಿಗೆ ದೀಪ ಹಚ್ಚಿ, ಬೇವು ಬೆಲ್ಲ ತಿಂದು ಹೋಳಿಗೆ ಸವಿಯುತ್ತಿದ್ದವರು ಇಂದು ಬಗೆಬಗೆಯ ಮಾಂಸದ ಅಡುಗೆ ಮಾಡಿ ಕುಟುಂಬ ಸಮೇತರಾಗಿ ಸಂಭ್ರಮಿಸುತ್ತಾರೆ. ಮಾಂಸಹಾರ ಅಂದ್ಮೇಲೆ ಅಲ್ಲಿ ಕುರಿ, ಮೇಕೆ ಮಾಂಸ ಸಾಮಾನ್ಯವಾಗಿ ಒಂದು ಕೆ.ಜಿ ತರೋರು ಕೂಡ ಹಬ್ಬದ ಕಾರಣ ಹೆಚ್ಚು ಮಾಂಸವನ್ನ ಖರೀದಿಸಿ ಭರ್ಜರಿಯಾಗಿ ಹಬ್ಬ ಮಾಡ್ತಾರೆ.
ಈ ಬಾರಿ ರಂಜಾನ್ ಕೂಡ ಇರುವುದರಿಂದ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕುರಿ, ಮೇಕೆಗಳ ಬೆಲೆ ಹೆಚ್ಚಾಗಿದೆ. ಪ್ರಸಿದ್ಧ ಬನ್ನೂರು ಕುರಿ ಮಾಂಸಕ್ಕೂ ಭಾರಿ ಬೇಡಿಕೆ ಬಂದಿದೆ. ವಿಶೇಷವಾಗಿ ಇಂದು, ಗುಡ್ಡೆ ಮಾಂಸ ತಿನ್ನುವುದು ವಾಡಿಕೆ.
ಸಾಮಾನ್ಯವಾಗಿ, ಕುರಿ ಮತ್ತು ಮೇಕೆಗಳನ್ನು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ತಂದು ಮಾರಾಟ ಮಾಡ್ತಾರೆ. ಗುಡ್ಡೆ ಮಟನ್ ಮಾಂಸಕ್ಕೆ ಕೆಜಿಗೆ 800-900 ಆಗಿದೆ. ವರ್ಷಕ್ಕೊಮ್ಮೆ ಬರೋ ಹಬ್ಬ, ಬೆಲೆ ಜಾಸ್ತಿ ಅದ್ರೂ ಹಬ್ಬ ಮಾಡ್ಲೇಬೇಕು ಎಂದು ಜನ ಹೊಸ ತೊಡಕಿನ ಮಾಂಸಹಾರವನ್ನ ಮನೆಯಲ್ಲಿ ಸವಿಯಲು ಬಜಾರ್ ನಲ್ಲಿ ಖರೀದಿ ಭರಾಟೆ ಭರ್ಜರಿಯಾಗಿ ಮಾಡ್ತಿದ್ದಾರೆ.