ಹೊಸದಿಗಂತ ವರದಿ,ಹುಬ್ಬಳ್ಳಿ:
ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗಾಂಡಾ ಮೂಲದ ಡ್ರಗ್ ಪೆಡ್ಲರ್ ಮಹಿಳೆಯೊಬ್ಬಳನ್ನು ಹುಬ್ಬಳ್ಳಿ ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಖರ ಗುಪ್ತಚರ ಮಾಹಿತಿ ಆಧಾರ ಮೇಲೆ ದಾಳಿ ಮಾಡಿದ ಎನ್‌ಸಿಬಿ ಪೊಲೀಸ್‌ರು ಅವಳಿಂದ ಸುಮಾರ ೧.೫ ಕೋಟಿ ರೂ. ಮೌಲ್ಯದ ೯೯೫ ಗ್ರಾಂ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಮಹಿಳೆ ಉಂಡಾದಿಂದ ದೆಹಲಿಯವರೆಗೆ ವಿಮಾನದ ಮೂಲಕ ಬಂದಿದ್ದಾಳೆ. ನಂತರ ದೆಹಲಿಯಿಂದ ನಿಜಾಮುದ್ದಿನ ರೈಲು ಮೂಲಕ ಬೆಂಗಳೂರಿಗೆ ಮಕ್ಕಳಿಗೆ ಆಹಾರವಾಗಿ ನೀಡಲಾಗುವ ಸೆರ್ಲಾಕ್‌ನ ಎರಡು ಪ್ಯಾಕ್‌ನಲ್ಲಿ ಇಟ್ಟು ಸಾಗಿಸುತ್ತಿದ್ದಳು. ಗುಪ್ತಚರರು ಈ ಮಾಹಿತಿಯನ್ನು ಎನ್‌ಸಿಬಿಗೆ ತಿಳಿಸಿದ್ದಾರೆ. ಮಾಹಿತಿ ಆಧಾರ ಮೇಲೆ ಹುಬ್ಬಳ್ಳಿಗೆ ಶುಕ್ರವಾರ ರೈಲು ಬಂದಾಗ ಎನ್‌ಸಿಬಿ ಅಕಾರಿಗಳು ದಾಳಿ ನಡೆಸಿ ಬಂಸಿದ್ದಾರೆ. ವಿಚಾರಣೆ ವೇಳೆ ಪ್ರತಿ ಪ್ಯಾಕ್‌ನಲ್ಲಿ ಸುಮಾರು ೫೦೦ ಗ್ರಾಂ ಡ್ರಗ್ಸ್ ಇತ್ತು ಎಂದು ತಿಳಿದುಬಂದಿದೆ. ಡ್ರಗ್ಸ್ ವಶಕ್ಕೆ ಪಡೆದು ಮಹಿಳೆಯನ್ನು ಬಂಸಿರುವ ಎನ್‌ಸಿಬಿ ಅಕಾರಿಗಳು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ .