ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಬಹುಭಾಷೆಯಲ್ಲಿ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಫಸ್ಟ್ ಡೇ, ಫಸ್ಟ್ ಶೋ ನೋಡಿರುವ ಅಭಿಮಾನಿಗಳು ಚಿತ್ರ ನೋಡಿ ಮೆಚ್ಚಿದ್ದಾರೆ.
ಯುಐ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ. ಚಿತ್ರದ ಕಥೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬೆಳಗ್ಗೆ 6:30ರಿಂದಲೇ ಚಿತ್ರದ ಪ್ರದರ್ಶನ ಶುರುವಾಗಿದೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಬಂದಿದೆ.
ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.