ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹನ್‌ಮುಂಬೈ ಕಾರ್ಪೊರೇಷನ್ (BMC)ಗೆ ಗುರುವಾರ ನಡೆದ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದೆ. ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಆಕ್ಸಿಸ್ ಮೈ ಇಂಡಿಯಾ ಸೇರಿದಂತೆ ಮೂರು ಮತಗಟ್ಟೆ ಸಮೀಕ್ಷೆ (exit polls) ತಿಳಿಸಿವೆ.
ಆದ್ದರಿಂದ, ಮುಂಬೈ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಂಬೈ ಮೇಯರ್ ಆದ ಇತಿಹಾಸವನ್ನು ಬಿಜೆಪಿ ಮಾಡಲಿದೆಯೇ? ಎನ್ನುವ ವಿಚಾರದ ಮೇಲೆ ಎಲ್ಲರ ಗಮನ ಶುರುವಾಗಿದೆ.
ಪೋಲ್ ಆಫ್ ಪೋಲ್ಸ್ ಹಾಗೂ ಸಾರ್ವಜನಿಕ ಅಭಿಪ್ರಾಯದ ಎಕ್ಸಿಟ್ ಪೋಲ್‌ಗಳು ಕೂಡ ಮಹಾಯುತಿ ಮೈತ್ರಿಕೂಟವು ಮುಂಬೈ ಮಹಾನಗರ ಪಾಲಿಕೆಯಲ್ಲಿ 138 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿವೆ.
ಎಲ್ಲರ ಗಮನ ಮುಂಬೈ ಮಹಾನಗರ ಪಾಲಿಕೆಯ ಫಲಿತಾಂಶದ ಮೇಲಿದ್ದರೂ, ಮತದಾನದ ನಂತರ ಬಿಡುಗಡೆಯಾದ ಎಕ್ಸಿಟ್ ಪೋಲ್ ಅಂದಾಜಿನ ಪ್ರಕಾರ, ಮುಂಬೈನಲ್ಲಿ ಮಹಾಯುತಿ ಸಂಪೂರ್ಣ ಬಹುಮತ ಪಡೆಯುವುದು ಖಚಿತವಾಗಿದೆ. ಮಹಾಯುತಿ 138 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ, ಐತಿಹಾಸಿಕ ಮತ್ತು ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಅನ್ನು ಕಾಂಗ್ರೆಸ್, ಶಿವಸೇನೆ ಮತ್ತು ಆರ್‌ಪಿಐ ಹೊಂದಿತ್ತು. ಇನ್ನು 1997ರಿಂದ 2017ರವರೆಗೂ ಮುಂಬೈ ಮಹಾನಗರ ಪಾಲಿಕೆಗೆ ಶಿವಸೇನೆ ನಾಯಕ ಮೇಯರ್ ಆಗಿದ್ದರು.
ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದರೂ ಮರಾಠಿ ಮತ್ತು ಮುಸ್ಲಿಂ ಮತಗಳನ್ನು ಪಡೆಯಬಹುದು ಆದರೆ, ಉತ್ತರ ಹಾಗೂ ದಕ್ಷಿಣ ಭಾರತೀಯರು ಹೆಚ್ಚಾಗಿ ಬಿಜೆಪಿಗೆ ಮತ್ತ ಹಾಕಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.
JVC ಸಮೀಕ್ಷೆ ಪ್ರಕಾರ, ಬಿಜೆಪಿ 138 ಸ್ಥಾನಗಳನ್ನು ಪಡೆದರೆ, ಉದ್ಧವ್ ಠಾಕ್ರೆ ಶಿವಸೇನಾ (UBT) 59 ಸ್ಥಾನ, ಕಾಂಗ್ರೆಸ್ 23 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
ಆಕ್ಸಿಸ್ ಮೈ ಇಂಡಿಯಾ (Axis My India) ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಶಿವಸೇನೆ 131-151 ಸ್ಥಾನಗಳನ್ನು ಮತ್ತು ಸೇನಾ ಯುಬಿಟಿ ಮೈತ್ರಿಕೂಟ 58-68 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.
ಇನ್ನೂ Sakal ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಶಿವಸೇನೆಗೆ 119 ಸ್ಥಾನ, UBT 75 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದು, ಕಾಂಗ್ರೆಸ್ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದೆ.


