17 ಗಂಟೆಗಳಲ್ಲಿ 67 ಪಬ್‌ಗಳಲ್ಲಿ ಕುಡಿದು ಗಿನ್ನೆಸ್‌ ದಾಖಲೆ ಬರೆದ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೇವಲ 17 ಗಂಟೆಗಳ ಅವಧಿಯಲ್ಲಿ 67 ವಿವಿಧ ಪಬ್‌ಗಳಲ್ಲಿ ಮದ್ಯಪಾನ ಮಾಡುವ ಮೂಲಕ ಬ್ರಿಟನ್‌ ನ 22 ವರ್ಷ ವಯಸ್ಸಿನ ಯುವಕ ನಾಥನ್ ಕ್ರಿಂಪ್ ಗಿನ್ನೆಸ್‌ ದಾಖಲೆಗೆ ಪಾತ್ರನಾಡಿದ್ದಾನೆ.
ಈ ಹಿಂದೆ ಗರೆಥ್ ಮರ್ಫಿ ಎಂಬುವವರು 24 ಗಂಟೆಗಳಲ್ಲಿ 54 ಪಬ್‌ಗಳಿಗೆ ಹೋಗಿ ಮದ್ಯ ಸೇವಿಸಿ ಮಾಡಿದ್ದ ದಾಖಲೆಯನ್ನು ಮುರಿಯುವ ಮೂಲಕ ಕೀತ್‌ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಸರು ನೋಂದಾಯಿಸಿದ್ದಾನೆ.
ಕೀತ್‌ ಈ ಸಾಧನೆ ಹಿಂದೆ ಪ್ರೇರಣಾದಾಯಕ ಸಂಗತಿಯೊಂದಿದೆ. ಗೋ ಫಂಡ್‌ ಮೀ ಅಭಿಯಾನದ ಪ್ರಯುಕ್ತ ಕೀತ್‌ ಡಾಗ್ಸ್ ಟ್ರಸ್ಟ್‌ಗೆ ಹಣವನ್ನು ದಾನ ಮಾಡಲು ಜನರನ್ನು ಒತ್ತಾಯಿಸಲು ಈ ಮಾರ್ಗವನ್ನು ಕಂಡುಕೊಂಡಿದ್ದಾನೆ. ಅಕ್ಟೋಬರ್ 2020ರಲ್ಲಿ ತನ್ನ ಮೆಚ್ಚಿನ ನಾಯಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು ಕೀತ್‌ ಗೆ ಈ ಸವಾಲನ್ನು ತೆಗೆದುಕೊಳ್ಳಲು ಸ್ಫೂರ್ತಿಯಂತೆ.

ಸೆಪ್ಟೆಂಬರ್ 17 ರಂದು ಕ್ರಿಂಪ್ 17 ಗಂಟೆಗಳಲ್ಲಿ 67 ಪಬ್‌ಗಳಲ್ಲಿ ಕುಡಿಯುವ ಮೂಲಕ ದಾಖಲೆಗೆ ಪಾತ್ರರಾಗಿದ್ದಾರೆ. ಅವನ ಸ್ನೇಹಿತರಾದ ಒಲ್ಲಿ ಮತ್ತು ಆರ್ಚಿ ಆತನಿಗೆ ಸಹಾಯ ಮಾಡಿದ್ದಾರೆ. ಮತ್ತು ಅವರು ತಾವು ಹಾಜರಾದ ಪ್ರತಿ ಪಬ್‌ನಿಂದ ರಸೀದಿಗಳು ಮತ್ತು ಸಹಿಗಳನ್ನು ಸಂಗ್ರಹಿಸಿದ್ದಾರೆ.
ಈ  ದಾಖಲೆಯನ್ನು ಹೇಗೆ ಸಾಧ್ಯವಾಯ್ತು ಎಂಬುದರ ಬಗ್ಗೆ ಕೀತ್ ಮಾತನಾಡಿದ್ದಾನೆ, “ಮೊದಲ 25 ಪಬ್‌ಗಳಿಗೆ ಹೋದಾಗ ಶಾಂತವಾಗಿರಲು ಯತ್ನಿಸಿದೆ. ಆದರೆ ಆ ಬಳಿಕ ಹೋದ ಪಬ್‌ ಗಳಲ್ಲಿ ಕುಡಿಯಲು ಆಗದಷ್ಟು ನಿತ್ರಾಣನಾಗಿದ್ದೆ. ಆಗ ಒಂದು ಗ್ಲಾಸ್‌ ನಲ್ಲಿ ಆಲ್ಕೋಹಾಲ್ ಮತ್ತು ಇನ್ನೊಂದರಲ್ಲಿ ಆಲ್ಕೊಹಾಲ್‌ ಅಲ್ಲದ ಪಾನೀಯವನ್ನು ಕುಡಿಯುವ ಮೂಲಕ ಅಲ್ಕೋಹಾಲ್‌ ಅಂಶವನ್ನು ದೇಹದಿಂದ ಹೊರಹಾಕಲು ಯತ್ನಿಸಿದೆ ಎಂದಿದ್ದಾನೆ.
ಪಬ್‌ ಗಳಲ್ಲಿ ಬಿಯರ್, ಲಾಗರ್ ಮತ್ತು ಲಿಕ್ಕರ್ ಗಳನ್ನು ಕುಡಿದಿದ್ದೇನೆ. ನಾನು ಏನಿಲ್ಲವೆಂದರೂ 20 ರಿಂದ 30 ಲೀಟರ್ ಗಳಷ್ಟು ಮದ್ಯ ಕುಡಿದಿರಬೇಕು. ಇಷ್ಟು ಕಡಿಮೆ ಸಮಯದಲ್ಲಿ ಅಷ್ಟೊಂದು ಮದ್ಯ ಸೇವಿಸಲು ಸಾಕಷ್ಟು ಕಷ್ಟ ಪಟ್ಟಿದ್ದೇನೆ ಎಂದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!