ತಮ್ಮ ಮಗುವಿಗೆ ಭಾರತೀಯ ʼಖಾದ್ಯʼದ ಹೆಸರಿಟ್ಟ ಇಂಗ್ಲೆಂಡ್‌ ದಂಪತಿ! ಸಾಮಾಜಿಕ ತಾಣಗಳಲ್ಲಿ ಸಂದೇಶಗಳ ಸುರಿಮಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹುಟ್ಟಿದ ಮಗುವಿಗೊಂದು ಹೆಸರು ಹುಡುಕುವುದು ಇದೆಯಲ್ಲಾ, ಅದು ಬಹಳಷ್ಟು ಖುಷಿಯಾದ ಹಾಗೂ ಅಷ್ಟೇ ಸವಾಲಿನ ಕೆಲಸವಾಗಿರುತ್ತದೆ. ಹಲವಾರು ಪೋಷಕರು ಬಹಳಷ್ಟು ಹುಡುಕಾಡಿ ತಮಗೆ ವಿಭಿನ್ನವೆನಿಸುವ ಚಂದನೆಯದ್ದೊಂದು ಹೆಸರನ್ನು ಕೊನೆಗೆ ಆಯ್ಕೆ ಮಾಡುತ್ತಾರೆ. ಹೀಗೆ ಹೆಸರಿಡುವಾಗ ಹಲವು ಪೋಷಕರು ಕೆಲವೊಮ್ಮೆ ಪ್ರಸಿದ್ಧ ವ್ಯಕ್ತಿ ಅಥವಾ ತಮಗೆ ಇಷ್ಟವಾದ ಸ್ಥಳದ ಹೆಸರನ್ನೇ ಇಟ್ಟ ಬಗ್ಗೆ ನೀವು ಕೇಳಿರಬಹುದು.ಆದರೆ, ಯಾರಾದರೂ ಪೋಷಕರು ತಾವು ಇಷ್ಟಪಟ್ಟು ತಿಂದ ಖಾದ್ಯವೊಂದರ ಹೆಸರನ್ನೇ ಮಗುವಿಗೆ ಇಟ್ಟಿದ್ದನ್ನು ಕೇಳಿದ್ದೀರಾ!?
ಇಂಗ್ಲೆಂಡ್‌ ನಲ್ಲಿ ಇಂತಹದ್ದೊಂದು ವಿನೋದಮಯ ಘಟನೆ ನಡೆದಿದೆ. ರೆಸ್ಟೋರೆಂಟ್‌ ಒಂದರಲ್ಲಿ ಭಾರತೀಯ ಮೂಲದ ಖಾದ್ಯವೊಂದರ ಸ್ವಾದಕ್ಕೆ ಬೆರಗಾದ ದಂಪತಿ ತಮ್ಮ ನವಜಾತ ಶಿಶುವಿಗೆ ಭಾರತೀಯ ಖಾದ್ಯದ ಹೆಸರನ್ನೇ ಇಟ್ಟಿದ್ದಾರೆ!
ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ಪ್ರಸಿದ್ಧ ರೆಸ್ಟೋರೆಂಟ್. ಇತ್ತೀಚೆಗೆ, ರೆಸ್ಟೋರೆಂಟ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ ವಿಚಾರವೊಂದು ಭಾರೀ ವೈರಲ್‌ ಆಗಿದೆ. ತಮ್ಮ ರೆಸ್ಟೋರೆಂಟ್‌ಗೆ ಆಗಾಗ್ಗೆ ಭೇಟಿ ನೀಡುವ ದಂಪತಿಗಳು ʼತಮ್ಮ ರೆಸ್ಟೋರೆಂಟ್‌ನಲ್ಲಿನ ʼಪಕೋರಾʼ ಭಕ್ಷ್ಯದ ಹೆಸರನ್ನೇ ತಮ್ಮ ನವಜಾತ ಶಿಶುವಿಗೆ ಹೆಸರಿಸಿದ್ದಾರೆʼ ಎಂದು ರೆಸ್ಟೋರೆಂಟ್ ಫೇಸ್‌ಬುಕ್‌ನಲ್ಲಿ ಘೋಷಿಸಿದೆ.
‘ಪಕೋರಾ’ ಖಾದ್ಯವನ್ನು ಮಳೆಗಾಲದಲ್ಲಿ ಜನರು ಚಹಾದೊಂದಿಗೆ ಆನಂದಿಸುತ್ತಾರೆ. ನವಜಾತ ಶಿಶುವಿನ ಫೋಟೋವನ್ನು ಹಂಚಿಕೊಂಡಿರುವ ರೆಸ್ಟಾರೆಂಟ್ “ಈ ಹೆಸರನ್ನು ಹೊತ್ತ ಮೊದಲ ಮಗು… ಜಗತ್ತಿಗೆ ಸ್ವಾಗತ ಪಕೋರಾ! ನಾವು ನಿಮ್ಮನ್ನು ಭೇಟಿ ಮಾಡಲು ಕಾಯಲು ಸಾಧ್ಯವಿಲ್ಲ! ಎಂದು ಬರೆದುಕೊಂಡಿದೆ. ಜೊತೆಗೆ ರೆಸ್ಟೊರೆಂಟ್‌ನಲ್ಲಿ ‘ಪಕೋರಾ’ ಖಾದ್ಯದ ಹೆಸರನ್ನು ಹೊಂದಿರುವ ಬಿಲ್ ರಶೀದಿಯ ಫೋಟೋವನ್ನು ಸಹ ಹಂಚಿಕೊಂಡಿದೆ.

ಈ ಫೋಟೋ ಸೋಷಿಯಲ್‌ ಮಿಡಿಯಾದಲ್ಲಿ ಸೆನ್ಸೇಷನ್‌ ಸೃಷ್ಟಿಸಿದೆ. ನೆಟಿಜನ್‌ಗಳು ಶಿಶು ʼಪಕೋರಾʼಗೆ ಹೃತ್ಪೂರ್ವಕ ಹಾರೈಕೆಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, “ಇದು ನನ್ನ ಇಬ್ಬರು ಹೆಣ್ಣುಮಕ್ಕಳು ʼಚಿಕನ್ ಮತ್ತು ಟಿಕ್ಕಾ” ಎಂದು ಬರೆದು ಫೋಟೋ ಹಂಚಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!