ಜಿ-20 ಶೃಂಗಸಭೆ: ಅಕ್ಷರಧಾಮಕ್ಕೆ ಭೇಟಿ ಕೊಟ್ಟ ಯುಕೆ ಪ್ರಧಾನಿ ರಿಷಿ ಸುನಕ್ ದಂಪತಿ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುನೈಟೆಡ್ ಕಿಂಗ್‌ಡಂ (ಯುಕೆ) ಪ್ರಧಾನಿ ರಿಷಿ ಸುನಕ್, ಪತ್ನಿ ಸಮೇತ ಭಾನುವಾರ ಬೆಳಗ್ಗೆ ಅಕ್ಷರಧಾಮಕ್ಕೆ ತೆರಳಿ, ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುನಕ್ ಅಕ್ಷರಧಾಮ ದೇವಾಲಯದ ಆವರಣದಿಂದ ವಿಶ್ವ ನಾಯಕರೊಂದಿಗೆ ರಾಜ್‌ಘಾಟ್‌ಗೆ ತೆರಳಿದರು.

ಬ್ರಿಟನ್ ಪ್ರಧಾನಿ ಭೇಟಿಗೂ ಮುನ್ನ, ದೇವಾಲಯದ ಸುತ್ತಮುತ್ತಲೂ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಜಿ 20 ಶೃಂಗಸಭೆಯ ಸಮಯದಲ್ಲಿ ಹಿಂದು ದೇವಾಲಯಕ್ಕೆ ಭೇಟಿ ನೀಡುವುದು ಬಹಳ ಸಂತೋಷದಾಯಕವಾಗಿದೆ ಎಂದು ಶನಿವಾರ ತಿಳಿಸಿದರು. ಪ್ರಧಾನಿ ಮೋದಿಯವರ ಬಗ್ಗೆ “ಅಗಾಧವಾದ ಗೌರವ”ವಿದ್ದು, ಜಿ 20 ಸಭೆ ಯಶಸ್ವಿಯಾಗಲು ಅವರನ್ನು ಬೆಂಬಲಿವುದಾಗಿ ತಿಳಿಸಿದರು.

“ನಾನು ಹಿಂದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ನಾನು ಬೆಳೆದದ್ದು ಹೀಗೆಯೇ, ಹಾಗೆಯೇ ಇದ್ದೇನೆ. ಎಂದು ರಿಷಿ ಸುನಕ್ ಹೇಳಿದರು. ನನಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಸಮಯವಿರಲಿಲ್ಲ. ಆದರೆ ಈ ಬಾರಿ ಮಂದಿರಕ್ಕೆ ಭೇಟಿ ನೀಡುವುದರಿಂದ ನಾನು ಅದನ್ನು ಸರಿದೂಗಿಸಬಹುದು”ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!