ರಾಜ್‌ಘಾಟ್‌ಗೆ ಜಿ-20ನಾಯಕರ ಭೇಟಿ, ಮಹಾತ್ಮಗಾಂಧಿ ಸಮಾಧಿಗೆ ಅತಿಥಿಗಳ ಗೌರವ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆಯೇ ಜಿ-20 ಗಣ್ಯರು ರಾಜ್​ಘಾಟ್​ಗೆ ಆಗಮಿಸಿದ್ದು, ಎಲ್ಲರನ್ನೂ ಪ್ರಧಾನಿ ಮೋದಿ ಬರಮಾಡಿಕೊಂಡರು. ರಾಜ್​ಘಾಟ್​ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಅತಿಥಿಗಳು ಗೌರವ ನಮನ ಸಲ್ಲಿಸಿದರು. ಮಹಾತ್ಮ ಗಾಂಧಿ ಸಮಾಧಿಗೆ ನಮಿಸಿದ ಬಳಿಕ ʻಶಾಂತಿ ಗೀತೆ ಗಾಯನʼ ಮೊಳಗಲಿದೆ.

ಜಿ-20ನಾಯಕರ ಭೇಟಿ ಹಿನ್ನೆಲೆ ರಾಜ್‌ಘಾಟ್‌ಅನ್ನು ಹೂಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ರಾಜ್‌ಘಾಟ್‌ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಲಾಗಿದೆ. ಒಬ್ಬೊಬ್ಬರಾಗಿಯೇ ಜಿ-20ನಾಯಕರು ಮಹಾತ್ಮ ಗಾಂಧಿ ಸಮಾಧಿಗೆ ಬರುತ್ತಿದ್ದಾರೆ.

ಅಲ್ಲಿಂದ ನೇರವಾಗಿ ‘ಭಾರತ್ ಮಂಟಪʼಕ್ಕೆ ತೆರಳಿ G20 ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಭಾರತ್ ಮಂಟಪ ಆವರಣದ ಸೌತ್ ಪ್ಲಾಜಾದಲ್ಲಿ ನಡೆಯಲಿದೆ.

ಶೃಂಗಸಭೆಯ ಭಾಗವಾಗಿ ನಿನ್ನೆ ಎರಡು ಅಧಿವೇಶನಗಳು ನಡೆದಿದ್ದು, ಇಂದು 3ನೇ ಅಧಿವೇಶನ ‘ಒಂದು ಭವಿಷ್ಯ’ ವಿಚಾರವಾಗಿ ನಡೆಯಲಿದೆ. ಜಿ20 ಶೃಂಗಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ, ಒಪ್ಪಿಗೆ ಬಳಿಕ ಮುಂದಿನ ವರ್ಷದ ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ನಡೆಯುವುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!