ಪರಮಾಣು ಸ್ಥಾವರ ಘಟಕಗಳ ಮೇಲೆ ದಾಳಿ ನಿಲ್ಲಿಸಲು ರಷ್ಯಾಗೆ ಉಕ್ರೇನ್ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಶೆಲ್ ದಾಳಿಯಿಂದ ಅದಾಗಲೇ ಯುರೋಪ್‌ನ ಅತಿದೊಡ್ಡ ಝಪೊರಿಝ್ಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ಬಿದ್ದಿದೆ.
ಇದರ ಬೆನ್ನಲ್ಲೇ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ತಕ್ಷಣ ಪರಮಾಣು ಸ್ಥಾವರ ಘಟಕಗಳ ಮೇಲೆ ದಾಳಿ ನಿಲ್ಲಿಸಿ ಎಂದು ರಷ್ಯಾಗೆ ಮನವಿ ಮಾಡಿದ್ದಾರೆ.

ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝ್ಯಾಗೆ ಈಗಾಗಲೇ ಬೆಂಕಿ ಬಿದ್ದಿದೆ. ಇದು ಸ್ಫೋಟಗೊಂಡರೆ ಚರ್ನೋಬಿಲ್ ದುರಂತಕ್ಕಿಂತ 10 ಪಟ್ಟು ದೊಡ್ಡ ದುರಂತ ಎದುರಾಗಲಿದೆ. ಯುದ್ಧದ ಪರಿಣಾಮವನ್ನು ಎಷ್ಟೋ ಪೀಳಿಗೆಗಳು ಎದುರಿಸುವ ಪರಿಸ್ಥಿತಿ ಬರುತ್ತದೆ. ತಕ್ಷಣವೇ ಪರಮಾಣು ಸ್ಥಾವರಗಳ ಮೇಲಿನ ದಾಳಿ ನಿಲ್ಲಿಸಿ, ಅಗ್ನಿಶಾಮಕ ದಳ ಬೆಂಕಿ ನಂದಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!