ರಷ್ಯಾ ಪಡೆಗಳ ಮೇಲೆ ಉಕ್ರೇನ್‌ ದಾಳಿ: 24 ಗಂಟೆಯಲ್ಲಿ 1,000ಕ್ಕೂ ಹೆಚ್ಚು ರಷ್ಯಾ ಸೈನಿಕರು ಹತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ಉಕ್ರೇನ್‌ ಕದನವು ಮುಂದುವರೆದಿದ್ದು 9 ನೇ ತಿಂಗಳು ಪ್ರವೇಶಿಸಿದೆ. ತನ್ನ ಬ್ಲಾಕ್‌ ಸೀ ಪಡೆಗಳ ಮೇಲೆ ಉಕ್ರೇನ್‌ ದಾಳಿಗೆ ಪ್ರತಿಯಾಗಿ ರಷ್ಯಾವು ಮಿಸೈಲ್‌ ಹಾಗೂ ಕ್ಷಿಪಣಿದಾಳಿಯನ್ನು ಹೆಚ್ಚಿಸಿ ಉಕ್ರೇನಿನ ಪ್ರಮುಖ ನಗರಗಳ ಮೂಲ ಸೌಕರ್ಯವನ್ನು ಕಡಿತಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಸೈನಿಕರೂ ಕೂಡ ದಾಳಿ ಮುಂದುವರಿಸಿದ್ದು ನಿಶ್ಶಸ್ತ್ರಧಾರಿ ರಷ್ಯಾ ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಕಳೆದ 24 ಗಂಟೆಗಳಲ್ಲಿ 1 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್‌ ಹೇಳಿದೆ. ಇದರಿಂದ ರಷ್ಯಾವು ಒಂದೇ ದಿನದಲ್ಲಿ ಅತಿ ಹೆಚ್ಚು ಸಾವುನೋವುಗಳನ್ನು ಅನುಭವಿಸಿದೆ. ಉಕ್ರೇನ್‌ನ ರಕ್ಷಣಾ ಸಚಿವಾಲಯವು ಇದುವೆರೆಗೆ 71,200 ರಷ್ಯಾದ ಸೈನಿಕರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.

ಇತ್ತೀಚಿನ ಬೆಳವಣಿಗೆಯೊಂದರಲ್ಲಿ ರಷ್ಯಾ ಯುಕ್ರೇನ್‌ನೊಂದಿಗೆ ಯುದ್ಧದ ಮಧ್ಯೆ ಧಾನ್ಯಗಳನ್ನು ರಫ್ತು ಮಾಡಲು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಒಪ್ಪಂದದಿಂದ ಹೊರಬಂದಿದೆ. ಜುಲೈನಲ್ಲಿ ಯುಎನ್ ಮತ್ತು ಟರ್ಕಿ ಈ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರೈಮಿಯಾದಲ್ಲಿ ರಷ್ಯಾದ ಹಡಗುಗಳ ಮೇಲೆ ದಾಳಿ ಮಾಡಲು ಧಾನ್ಯ ಕಾರಿಡಾರ್ ಅನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ ನಂತರ ಉಕ್ರೇನ್‌ನಿಂದ ಭದ್ರತಾ ಖಾತರಿಗಳನ್ನು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!