Thursday, February 9, 2023

Latest Posts

ಉಕ್ರೇನ್ ಕ್ಷಿಪಣಿ ದಾಳಿ: ಬಲಿಯಾದ ರಷ್ಯಾ ಸೈನಿಕರ ಸಂಖ್ಯೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್ ರಷ್ಯಾದ ಪಡೆಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಡೊನೆಟ್ಸ್ಕ್ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ 400 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಘೋಷಿಸಿದೆ. ಕ್ಷಿಪಣಿಯು ಮಕಿವ್ಕಾದಲ್ಲಿನ ಕಟ್ಟಡವನ್ನು ನಾಶಪಡಿಸಿದ್ದು, ಕಟ್ಟಡದೊಳಗಿದ್ದ ರಷ್ಯಾ ಸೈನಿಕರೆಲ್ಲರೂ ಸಾವನ್ನಪ್ಪಿದ್ದಾರೆ. ಆದರೆ, ಈ ದಾಳಿಯಲ್ಲಿ ಸತ್ತವರ ಒಟ್ಟು ಸಂಖ್ಯೆಯನ್ನು ಯಾರೂ ದೃಢಪಡಿಸಿಲ್ಲ. ರಷ್ಯಾದ ಅಧಿಕಾರಿಗಳು ಸಹ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ ಹೊರತು ನಿರ್ದಿಷ್ಟ ಅಂಕಿ ಅಂಶಗಳನ್ನು ಹೊರಹಾಕಿಲ್ಲ.

ಅಮೆರಿಕ ಒದಗಿಸಿದ ಕ್ಷಿಪಣಿಗಳಿಂದ ಉಕ್ರೇನ್ ದಾಳಿ ನಡೆಸಿದೆ ಎಂದು ಹಲವು ಅಧಿಕಾರಿಗಳು ವಿವರಿಸಿದ್ದಾರೆ. ಉಕ್ರೇನ್ ಹೇಳುವ ಸತ್ತವರ ಸಂಖ್ಯೆ ಕಡಿಮೆ ಎಂದು ರಷ್ಯಾದ ಅಧಿಕಾರಿಗಳು ಹೇಳುತ್ತಾರೆ. ಉಕ್ರೇನ್ ದಾಳಿಯಲ್ಲಿ ರಷ್ಯಾದ ಅನೇಕ ಅಧಿಕಾರಿಗಳು ಗಾಯಗೊಂಡಿದ್ದಾರೆಂದು ಹೇಳಲಾಗಿದೆ.

ಉಕ್ರೇನ್ ಕ್ಷಿಪಣಿ ದಾಳಿಯಿಂದ ಸಂಪೂರ್ಣ ಕಟ್ಟಡ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅದರಲ್ಲಿದ್ದ ರಷ್ಯಾದ ಸೈನಿಕರ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ. ಕೆಲವು ತಿಂಗಳುಗಳಿಂದ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಿದ್ದರೂ, ಉಕ್ರೇನ್ ಹಿಂದೆ ಸರಿಯದೆ ಹೋರಾಡುತ್ತಿದೆ. ಪಾಶ್ಚಿಮಾತ್ಯ ದೇಶಗಳು ಒದಗಿಸಿದ ಶಸ್ತ್ರಾಸ್ತ್ರಗಳು ಮತ್ತು ತಾಂತ್ರಿಕ ನೆರವಿನೊಂದಿಗೆ ಉಕ್ರೇನ್ ಪಟ್ಟು ಬಿಡದೆ ಹೋರಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!