ಮುಳುಗಿತು ರಷ್ಯದ ಪ್ರಮುಖ ಯುದ್ಧನೌಕೆ, ಯುದ್ಧಕ್ಕೆ ಸಿಕ್ತಾ ಟರ್ನಿಂಗ್ ಪಾಯಿಂಟ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್‌ನ ನೆಪ್ಚೂನ್‌ ಆಂಟಿ-ಷಿಪ್‌ ಕ್ಷಿಪಣಿ ರಷ್ಯಾ ಯುದ್ಧ ನೌಕೆಯನ್ನು ಹೊಡೆದುಹಾಕಿದೆ. ಮಿಸೈಲ್‌ ತಾಕಿದ ಕೆಲವೇ ಗಂಟೆಗಳಲ್ಲಿ ರಷ್ಯಾ ನೌಕೆ ಸಮುದ್ರದಲ್ಲಿ ಮುಳುಗಿದೆ ಎಂದು ಉಕ್ರೇನ್‌ ಹೇಳಿದೆ. ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ 51ನೇ ದಿನಕ್ಕೆ ಕಾಲಿಟ್ಟಿದ್ದು, ಈ ಘಟನೆ ಎರಡೂ ರಾಷ್ಟ್ರಗಳ ನಡುವೆ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿಗೆ ಕಾರಣಾಗಬಹುದು ಎಂಬ ಸಂದೇಶ ರವಾನೆಯಾಗುತ್ತಿದೆ.

ರಷ್ಯಾದ ನೌಕಾಪಡೆಯ ದಾಳಿಯ ನೇತೃತ್ವ ವಹಿಸಿದ್ದ ಮಾಸ್ಕ್ವಾ ಯುದ್ಧನೌಕೆಯಲ್ಲಿ ಸುಮಾರು 500 ಸೇನಾ ಸಿಬ್ಬಂದಿ ಇದ್ದರು ಎನ್ನಲಾಗಿದೆ. ಎಲ್ಲರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಇದೇ ಸಮಯದಲ್ಲಿ ಚಂಡಮಾರುತ ಉಂಟಾದದ್ರಿಂದ ಹಡಗು ಸಮುದ್ರದಲ್ಲಿ ಮುಳುಗಿದೆ ಎಂದು ರಕ್ಷಣಾ ಸಚಿವಾಲಯದ ಮಾಹಿತಿ ಮೇರೆಗೆ ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಘಟನೆ ರಷ್ಯಾಕ್ಕೆ ʻದೊಡ್ಡ ಹೊಡೆತʼ ಎಂದು ಅಮೆರಿಕಾ ಬಿಂಬಿಸಿದೆ. ಆದರೆ ಕ್ಷಿಪಣಿ ಕಾರಣದಿಂದಾಗಿ ಈ ನೌಕೆ ಮುಳುಗಿದೆಯಾ ಅಥವಾ ಬೇರೆ ಕಾರಣವಾ..? ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!