ಇಂದು ತಾಯ್ನಾಡಿಗೆ ಮರಳಿದ್ದಾರೆ ಉಕ್ರೇನ್‌ನಲ್ಲಿ ಸಿಲುಕಿದ್ದ 2100 ಕ್ಕೂ ಹೆಚ್ಚು ಭಾರತೀಯರು

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಭಾರತೀಯ ನಾಗರಿಕರನ್ನು ರಕ್ಷಿಸಲು ಆರಂಭವಾದ ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್‌ನಲ ನೆರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳ ಮೂಲಕ 2135 ಭಾರತೀಯರನ್ನು ಇಂದು ವಾಪಸ್ ಕರೆತರಲಾಗಿದೆ.

ಇಂದು ವಿಶೇಷ ನಾಗರಿಕ ವಿಮಾನಗಳಲ್ಲಿ 9 ಹೊಸದಿಲ್ಲಿಗೆ ಬಂದಿಳಿದವು ಮತ್ತು ಎರಡು ಮುಂಬೈ ತಲುಪಿದವು. ಬುಡಾಪೆಸ್ಟ್ ನಿಂದ 6 ವಿಮಾನಗಳು, ಬುಕಾರೆಸ್ಟ್ ನಿಂದ 2, ಜೆರ್‌ಸ್ಜೋವ್ ನಿಂದ 2 ಮತ್ತು ಕೊಸಿಸ್ ನಿಂದ 1 ವಿಮಾನಗಳು ಆಗಮಿಸಿದವು.

ಇದರೊಂದಿಗೆ ಫೆಬ್ರವರಿ 22 ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ 15,900ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ. 66 ವಿಶೇಷ ನಾಗರಿಕ ವಿಮಾನಗಳ ಮೂಲಕ ಭಾರತೀಯರ ಸಂಖ್ಯೆ 13852ಕ್ಕೆ ಏರಿದೆ. ಇಲ್ಲಿಯವರೆಗೆ ಐಎಎಫ್ 10 ವಿಮಾನಗಳನ್ನು ಹಾರಾಟ ನಡೆಸಿದೆ. ಆಪರೇಶನ್ ಗಂಗಾ ಭಾಗವಾಗಿ 2056 ಪ್ರಯಾಣಿಕರನ್ನು ವಾಪಸ್ ಕರೆತರುವಾಗ, ಉಕ್ರೇನ್‌ಗೆ 26 ಟನ್ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗಿದೆ.

ನಾಳೆ ಬುಡಾಪೆಸ್ಟ್ (5), ಸುಸೇವಾ (2) ಮತ್ತು ಬುಕಾರೆಸ್ಟ್ (1) ನಿಂದ 8 ವಿಶೇಷ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇವುಗಳಲ್ಲಿ 1500ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!