Saturday, March 25, 2023

Latest Posts

ರಷ್ಯಾದ 280 ಯುದ್ಧ ಟ್ಯಾಂಕ್ ನಾಶ ಮಾಡಿದ ಉಕ್ರೇನ್​ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್​ – ರಷ್ಯಾ ನಡುವಿನ ಯುದ್ಧದ ಭೀಕರತೆ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 9 ದಿನಗಳಿಂದ ಎರಡು ಕಡೆಯಿಂದ ಇನ್ನಷ್ಟು ಸಂಘರ್ಷ ನಡೆಯುತ್ತಿದೆ. ಇದೀಗ ಉಕ್ರೇನ್​​ ರಷ್ಯಾದ ಬಲಿಷ್ಠ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕರ್​ ಧ್ವಂಸಗೊಳಿಸಿದೆ.
ಉಕ್ರೇನ್​ ಇಲ್ಲಿಯವರೆಗೆ 6 ಸಾವಿರಕ್ಕೂ ಅಧಿಕ ಎದುರಾಳಿ ಸೈನಿಕರ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಇದರ ಮಧ್ಯೆ ರಷ್ಯಾದ 280 ಯುದ್ಧ ಟ್ಯಾಂಕ್ ನಾಶ ಮಾಡಿದೆ.
ಉಕ್ರೇನಿಯನ್ ಮಿಲಿಟರಿ ಪಡೆಗೆ ಯುಎಸ್​​ ಒದಗಿಸಿರುವ ಹ್ಯಾಂಡ್​ ಹೆಲ್ಡ್​ ಟ್ಯಾಂಕ್​ ವಿರೋಧಿ ಕ್ಷಿಪಣಿ ಸಹಾಯದಿಂದ ರಷ್ಯಾದ 280 ಶಸ್ತ್ರಸಜ್ಜಿತ ವಾಹನ ಧ್ವಂಸಗೊಳಿಸಿದೆ . 300 ಗುಂಡುಗಳನ್ನು ಹಾರಿಸಲಾಗಿದೆ ಎಂದು ವರದಿಯಾಗಿದೆ
ಲಭ್ಯವಾಗಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ ಸುಮಾರು 9,166 ಸೈನಿಕರು, 37 ಹೆಲಿಕಾಪ್ಟರ್​ಗಳು, 251 ಟ್ಯಾಂಕರ್​ಗಳು ಉಕ್ರೇನ್ ದಾಳಿಗೆ ನಾಶವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!