ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದೊಂದಿಗೆ ಯುದ್ಧ ನಡೆಸಿ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಉಕ್ರೇನ್ ಇದೀಗ ಮತ್ತೆ ಚರ್ಚೆಯಲ್ಲಿದೆ.
ಉಕ್ರೇನ್, ಅಶ್ಲೀಲ ಚಿತ್ರಗಳ ಪೊರ್ನೊಗ್ರಫಿಯನ್ನು ಅಪರಾಧ ಪಟ್ಟಿಯಿಂದ ಕೈಬಿಟ್ಟು, ಕಾನೂನುಬದ್ಧಗೊಳಿಸಲು ಮುಂದಾಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಂಸದ ಯರೊಸಲಾವ್ ಝೆಲೆಝಿಯಾಂಕ್ ಈ ಪ್ರಸ್ತಾವವನ್ನು ಅಲ್ಲಿನ ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ಸದ್ಯ ಉಕ್ರೇನ್‌ನಲ್ಲಿ ಸೋವಿತ್ ಕಾಲದ ಕಾನೂನು ಇದ್ದು, ಅವು ಇಂದಿನ ನೈತಿಕ ಮತ್ತು ಆರ್ಥಿಕ ಪರಿಸ್ಥಿತಿಗೆ ಹೊಂದಿಕೆಯಾಗದು. ಅಶ್ಲೀಲ ಚಿತ್ರಗಳ ತಯಾರಿಕಾ ಉದ್ಯಮವನ್ನು ಕಾನೂನುಬದ್ಧಗೊಳಿಸಿದರೆ ದೇಶಕ್ಕೆ ಹೆಚ್ಚಿನ ಆದಾಯ ತಂದುಕೊಡಲಿದೆ. ಅದು ಸದ್ಯ ನಡೆಯುತ್ತಿರುವ ಯುದ್ಧದ ವೆಚ್ಛದಿಂದ ಬಳಲಿರುವ ದೇಶಕ್ಕೆ ತುಸುಮಟ್ಟಿನ ನೆರವಾಗಲಿದೆ ಎಂದಿದ್ದಾರೆ.
ಈ ಮಸೂದೆಗೆ ಸಂಸದರಿಂದ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ. ಅಧಿಕಾರಿಗಳು, ವಯಸ್ಕರ ಚಿತ್ರ ತಯಾರಕರು ಮತ್ತು ನಾಗಕರು ಮಸೂದೆಯ ನೈತಿಕತೆ, ಕಾನೂನು ಮತ್ತು ಯುದ್ಧ ಸಂದರ್ಭದಲ್ಲಿ ಇದರ ಅಗತ್ಯ ಕುರಿತು ಪ್ರಶ್ನಿಸಿದ್ದಾರೆ.
ಉಕ್ರೇನ್‌ನ 301ನೇ ವಿಧಿಯನ್ವಯ ಅಶ್ಲೀಲ ಚಿತ್ರಗಳ ನಿರ್ಮಾಣ, ವಿತರಣೆ ಮತ್ತು ಅದನ್ನು ಹೊಂದುವುದು ಅಕ್ರಮ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ 3ರಿಂದ 5 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಬಹುದು. ಆದರೆ ಯುದ್ಧದ ಪರಿಣಾಮದಿಂದಾಗಿ ಆರ್ಥಿಕ ವೆಚ್ಚ ಭರಿಸಲು ಉಕ್ರೇನ್ ಈ ನಿರ್ಧಾರ ಕೈಗಳ್ಳಲಿದೆ ಎನ್ನಲಾಗಿದೆ.