ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ನ ಪೂರ್ವದಲ್ಲಿ ರಷ್ಯಾದ ಐದು ಯುದ್ಧ ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್‌ನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ.
ರಷ್ಯದ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ತಯಾರಾಗಿದ್ದು, ಇಂದು ಮುಂಜಾನೆ ರಷ್ಯ ಒಕ್ಕೂಟದ ಸಶಸ್ತ್ರ ಪಡೆಗಳು ಪೂರ್ವದಲ್ಲಿ ನಮ್ಮ ಘಟಕಗಳ ಮೇಲೆ ಶೆಲ್ ದಾಳಿ ಆರಂಭಿಸಿದವು. ಜೊತೆಗೆ ಬೋರಿಸ್ಪಿಲ್, ಓಜೆರ್ನಾಯ್, ಕುಲ್ಬಾಕಿನ್, ಚುಗೆವ್ನಲ್ಲಿನ ವಾಯುನೆಲೆಗಳ ಮೇಲೆ ರಾಕೆಟ್ ಮತ್ತು ಬಾಂಬ್ ದಾಳಿ ಆರಂಭಿಸಿದವು ಎಂದು ಮಿಲಿಟರಿ ಹೇಳಿದೆ.
ರಷ್ಯ ಉಕ್ರೇನ್‌ನ ಪ್ರದೇಶ ಮತ್ತು ವಸಾಹತುಗಳ ಮೇಲೆ ಫಿರಂಗಿ ಶೆಲ್ ದಾಳಿ ಆರಂಭಿಸಿದೆ. ಉಕ್ರೇನ್ ಸಶಸ್ತ್ರ ಪಡೆಗಳ ವಾಯುಪಡೆ ರಷ್ಯ ವೈಮಾನಿಕ ದಾಳಿ ಹಿಮ್ಮೆಟ್ಟಿಸುತ್ತದೆ ಎಂದು ಹೇಳಿದೆ.