ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಗಡಿ ವಿವಾದದ ಕುರಿತಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷರ ಕಚೇರಿ ಹೇಳಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶೃಂಗಸಭೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ರಷ್ಯಾ ಮತ್ತು ಅಮೆರಿಕ ಈ ಮಾತುಕತೆಗೆ ತಯಾರಿ ನಡೆಸಿದೆ.
ಭದ್ರತೆ ಹಾಗೂ ಕಾರ್ಯತಂತ್ರದ ಸ್ಥಿರತೆ ದೃಷ್ಟಿಯಿಂದ, ಸಂಬಂಧಿಸಿದ ಎಲ್ಲ ದೇಶಗಳನ್ನು ಸಮಾವೇಶದಲ್ಲಿ ಸೇರಿಸುವ ನಿರ್ಧಾರ ಮಾಡಲಾಗಿದೆ. ರಷ್ಯಾ ಉಕ್ರೇನ್‌ನ್ನು ಆಕ್ರಮಿಸುವುದಿಲ್ಲ ಎನ್ನುವ ಷರತ್ತಿನ ಮೇಲೆ ಶೃಂಗಸಭೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ಇದೆ. ಫ್ರೆಂಚ್ ಅಧ್ಯಕ್ಷರು ಯೂರೋಪಿನ ಎಲ್ಲ ದೇಶಗಳ ಜೊತೆ ಕೆಲಸ ಮಾಡುತ್ತಾರೆ ಎಂದು ತಿಳಿಸಲಾಗಿದೆ.