ಯುವ ಪೀಳಿಗೆ ಸಶಕ್ತ ಎಂದರೆ ಭಾರತದ ಭವಿಷ್ಯ ಸಶಕ್ತ ಎಂದರ್ಥ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ಕೇಂದ್ರ ಬಜೆಟ್ ಶಿಕ್ಷಣದ ಮೇಲೆ ಸಕರಾತ್ಮಕ ಪರಿಣಾಮ ಹೇಗೆ ಬೀರಲಿದೆ ಎನ್ನುವ ಬಗ್ಗೆ ಪ್ರಧಾನಿ ಮೋದಿ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ನಮ್ಮ ಯುವ ಪೀಳಿಗೆ ದೇಶದ ಶಕ್ತಿ. ಭವಿಷ್ಯದ ಉತ್ತಮ ನಾಯಕರು ಇವರೇ. ಈ ಎಲ್ಲ ಕಾರಣಗಳಿಂದಾಗಿ ಅವರನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸಿದಂತೆ ಎಂದಿದ್ದಾರೆ.

ಡಿಜಿಟಲ್ ವಿಶ್ವವಿದ್ಯಾಲಯ, ದಿ ಡಿಜಿಟಲ್ ಟೀಚರ್, ಒನ್ ಕ್ಲಾಸ್ ಒನ್ ಚಾನೆಲ್ ವ್ಯಾಪ್ತಿ ವಿಸ್ತಣೆ, ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನ, ಸ್ಟ್ರಾಂಗರ್ ಇಂಡಸ್ಟ್ರಿ ಕೌಶಲ ಸಂಪರ್ಕ ಬೆಳೆಸುವ ಹಾದಿ, ಗಿಫ್ಟ್ ಸಿಟಿಯಲ್ಲಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯ ಬಗ್ಗೆ ವೆಬಿನಾರ್‌ನಲ್ಲಿ ಮಾತುಕತೆ ನಡೆಯಲಿದೆ.

ವಿವಿಧ ಸಂಬಂಧಿತ ವಿಷಯಗಳ ಬಗ್ಗೆ ಸೆಷನ್ ನಡೆಯಲಿವೆ. ಇದರಲ್ಲಿ ಹಲವಾರು ಅಧಿಕಾರಿಗಳು, ಸಚಿವಾಲಯಗಳು, ಉದ್ಯಮದ ಪ್ರತಿನಿಧಿಗಳು, ಕೌಶಲ ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ತಜ್ಞರು ಭಾಗಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!