ಉಕ್ರೇನಿಯನ್ ರಾಯಭಾರ ಕಚೇರಿಗಳಿಗೆ ‘ರಕ್ತಸಿಕ್ತ ಪ್ಯಾಕೇಜ್’ಗಳ ರವಾನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಪೇನ್ ಸೇರಿದಂತೆ ಯುರೋಪಿನಾದ್ಯಂತ ಇರುವ ಉಕ್ರೇನಿಯನ್ ರಾಯಭಾರ ಕಚೇರಿಗಳು ಮತ್ತು ಹಲವಾರು ದೂತಾವಾಸಗಳಿಗೆ ಪ್ರಾಣಿಗಳ ಕಣ್ಣುಗಳನ್ನು ಹೊಂದಿರುವ ʻರಕ್ತಸಿಕ್ತ ಪ್ಯಾಕೇಜುಗಳುʼ ರವಾನೆಯಾಗಿವೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಉಕ್ರೇನಿಯನ್ ರಾಯಭಾರ ಕಚೇರಿಯಲ್ಲಿ ಸಿಬ್ಬಂದಿಯನ್ನು ಗಾಯಗೊಳಿಸಿದ್ದನ್ನು ಒಳಗೊಂಡಂತೆ ಬಾಂಬ್‌ಗಳ ಸರಣಿಯೊಂದಿಗೆ ರಕ್ತಸಿಕ್ತ ಪ್ಯಾಕೇಜ್‌ಗಳು ಕಂಡುಬಂದಿವೆ. ಈ ಘಟನೆಯು ರಷ್ಯಾದೊಂದಿಗಿನ ಸಂಪರ್ಕಗಳ ಬಗ್ಗೆ ಅನುಮಾನವನ್ನು ಹುಟ್ಟುಹಾಕಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಏತನ್ಮಧ್ಯೆ ಉಕ್ರೇನಿಯನ್ ವಿದೇಶಾಂಗ ಸಚಿವಾಲಯ ಈ ರಕ್ತಸಿಕ್ತ ಪ್ಯಾಕೇಜ್‌ಗಳು ಬೆದರಿಕೆ ಮತ್ತು ಭಯೋತ್ಪಾದನೆಯ ಯೋಜಿತ ಅಭಿಯಾನ(ಪ್ರೀ ಪ್ಲಾನ್ಡ್) ಎಂದು ಕರೆದಿದೆ. ನೆದರ್ಲ್ಯಾಂಡ್ಸ್, ಪೋಲೆಂಡ್, ಕ್ರೊಯೇಷಿಯಾ, ಇಟಲಿ ಮತ್ತು ಆಸ್ಟ್ರಿಯಾದ ರಾಯಭಾರ ಕಚೇರಿಗಳಲ್ಲಿ ಮತ್ತು ಜೆಕ್ ಗಣರಾಜ್ಯದ ನೇಪಲ್ಸ್ ಮತ್ತು ಬ್ರನೋದಲ್ಲಿನ ಕಾನ್ಸುಲೇಟ್‌ಗಳಲ್ಲಿ ಪ್ಯಾಕೇಜ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ರೋಮ್‌ನಲ್ಲಿರುವ ಉಕ್ರೇನಿಯನ್ ಅಧಿಕಾರಿ ಯೆವ್ಹೆನಿಯಾ ವೊಲೊಶ್ಚೆಂಕೊ, ತನ್ನ ರಾಯಭಾರ ಕಚೇರಿಯಲ್ಲಿ ಸ್ವೀಕರಿಸಿದ ಪಾರ್ಸೆಲ್‌ನಲ್ಲಿ ಮೀನಿನ ಕಣ್ಣು ಇದೆ ಎಂದು ಹೇಳಿದರು. ಬ್ರನೋದಲ್ಲಿ ಯಾವುದೋ ಪ್ರಾಣಿ ಅಂಗಾಂಶ ಕಳಿಸಿದ್ದಾರೆ ಎಂದು ಜೆಕ್ ಪೊಲೀಸರು ತಿಳಿಸಿದರು.  ಪ್ರೇಗ್‌ನಲ್ಲಿರುವ ಉಕ್ರೇನಿಯನ್ ರಾಯಭಾರ ಕಚೇರಿಗೂ ಕೂಡ ಇದೇ ರೀತಿಯ ಪ್ಯಾಕೇಜ್ ಆಗಮಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಲಿ ಸೀಗೆ ಉಕ್ರೇನಿಯನ್ ರಾಯಭಾರಿಯು ರೋಮ್‌ನಲ್ಲಿರುವ ಅವರ ಅಪಾರ್ಟ್ಮೆಂಟ್ ನಿವಾಸದ ಪ್ರವೇಶದ್ವಾರವನ್ನು ಧ್ವಂಸಗೊಳಿಸಲಾಗಿದೆ. ಹೊರಗಿನ ಮೆಟ್ಟಿಲು, ಸೀಲಿಂಗ್ ಮತ್ತು ಮುಂಭಾಗದ ಬಾಗಿಲನ್ನು ಕೊಳಕು ವಸ್ತುವಿನಿಂದ ಹೊದಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!