ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನಿಯನ್ ನಿರ್ಮಿತ ಮಿಲಿಟರಿ ವಿಮಾನವು ಸುಡಾನ್‌ನ ಓಮ್‌ಡರ್ಮನ್ ನಗರದಲ್ಲಿ ಪತನಗೊಂಡಿದ್ದು, ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ.
ಓಮ್‌ಡರ್ಮನ್‌ನ ಉತ್ತರದಲ್ಲಿರುವ ವಾಡಿ ಸಯೀದ್ನಾ ವಾಯುನೆಲೆಯಿಂದ ಆಂಟೊನೊವ್ ವಿಮಾನವು ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ. ಅಪಘಾತದ ಕಾರಣದ ಬಗ್ಗೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಿಲ್ಲ. ಮೃತರ ಶವಗಳನ್ನು ಓಮ್ದುರ್ಮನ್‌ನ ನೌ ಆಸ್ಪತ್ರೆಗೆ ರವಾನಿಸಲಾಗಿದೆ.