ರಷ್ಯ ಹಿಂತೆಗೆತದ ಪ್ರದೇಶಗಳಲ್ಲಿ ನಾಗರಿಕರ ನೂರಾರು ಮೃತದೇಹಗಳು- ನರಮೇಧದ ಆರೋಪ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಕ್ರೇನ್ ರಾಜಧಾನಿ ಕೀವ್ ಸಮೀಪದ ನಗರಗಳಿಂದ ರಷ್ಯ ಸೇನೆ ಹಿಂದಕ್ಕೆ ಬಂದಿರುವ ವರದಿಗಳ ಬೆನ್ನಲ್ಲೇ, ಅದು ತೆರವು ಮಾಡಿಹೋದ ಪ್ರದೇಶಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಾಗರಿಕರ ಮೃತದೇಹಗಳು ಸಿಕ್ಕಿವೆ ಎಂದು ಉಕ್ರೇನ್ ಹೇಳುತ್ತಿದೆ.

ಕೀವ್ ವಾಯವ್ಯ ಭಾಗಕ್ಕೆ 37 ಕಿಮೀ ದೂರದಲ್ಲಿರುವ ಬುಕಾ ಪಟ್ಟಣದ ಮೇಯರ್ ಆರೋಪಿಸುತ್ತಿರುವ ಪ್ರಕಾರ, ರಷ್ಯ ಹಿಂತೆಗೆದ ನಂತರ ಆ ಪ್ರದೇಶದಿಂದ 410 ಮೃತದೇಹಗಳು ಸಿಕ್ಕಿವೆ.

ಯುದ್ಧ ಸಂತ್ರಸ್ತ ನಾಗರಿಕರಲ್ಲಿ ಕೆಲವರಿಗೆ ಆಘಾತದಿಂದ ಮಾತನಾಡುವುದಕ್ಕೂ ಆಗುತ್ತಿಲ್ಲ, ಅಷ್ಟರಮಟ್ಟಿಗೆ ರಷ್ಯ ನಾಗರಿಕರ ವಿರುದ್ಧ ಹಿಂಸೆ ಎಸಗಿದೆ. ನಾವಿನ್ನೂ ನಗರಗಳನ್ನು ಸಂಪೂರ್ಣ ಪ್ರವೇಶಿಸುವುದು ಸಾಧ್ಯವಾಗುತ್ತಿಲ್ಲ. ರಷ್ಯ ಹಿಂತೆಗೆತದ ನಗರಗಳ ಪೂರ್ಣ ತಪಾಸಣೆ ನಡೆಸಿದರೆ ಇನ್ನೂ ಘೋರ ಕತೆಗಳು ಬೆಳಕಿಗೆ ಬರಲಿವೆ ಎಂದು ಉಕ್ರೇನ್ ಆಡಳಿತ ಹೇಳುತ್ತಿದೆ.

ಈ ಎಲ್ಲ ಆರೋಪಗಳನ್ನೂ ರಷ್ಯ ತಳ್ಳಿಹಾಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!