ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್’ನಲ್ಲಿ ಗೂಗಲ್ ಮ್ಯಾಪ್ ತೆಗೆದರೆ ಈಗ ಯಾವ ರಸ್ತೆ ಜನಸಂದಣಿಯಿಂದ ಕೂಡಿದೆ, ಯಾವ ಮಾರುಕಟ್ಟೆಗಳಲ್ಲಿ ಜನವಿದ್ದಾರೆ ಎಂಬುದೆಲ್ಲ ಗೊತ್ತಾಗುವುದಿಲ್ಲ. ಈ ಮಾಹಿತಿಗಳೆಲ್ಲ ಸಾರ್ವಜನಿಕಗೊಂಡರೆ ರಷ್ಯಕ್ಕೆ ದಾಳಿ ಮಾಡುವುದು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಆ ಎಲ್ಲ ಮಾಹಿತಿಗಳು ಬರದಂತೆ ಮಾಡಿದೆ ಗೂಗಲ್.
ಜನರ ಪ್ರಾಣ ರಕ್ಷಣೆ ಉದ್ದೇಶವಿಟ್ಟುಕೊಂಡಿರುವ ಈ ನಡೆ ಖಂಡಿತ ಒಳ್ಳೆಯ ಸುದ್ದಿಯೇ.
ಆದರೆ, ಕೆಟ್ಟ ಸುದ್ದಿ ಏನ್ ಗೊತ್ತಾ? ಗೂಗಲ್ ಮ್ಯಾಪ್ ಸೇರಿದಂತೆ ಯಾವುದೇ ತಂತ್ರಜ್ಞಾನ ಸಾಧನದೊಂದಿಗೆ ಬಹುವಾಗಿ ಅವಲಂಬಿತವಾದರೆ ಒಂದು ನಿರ್ದಿಷ್ಟ ಹಂತದಲ್ಲಿ ಅದನ್ನು ನಿಯಂತ್ರಿಸಿ ನಮ್ಮ ಬದುಕನ್ನು ಅಸ್ಥಿರಗೊಳಿಸಿಬಿಡಬಹುದಾದ, ಇಲ್ಲವೇ ತಮಗೆ ಬೇಕಾದವರಿಗೆ ಲಾಭ ಮಾಡಿಕೊಡಬಹುದಾದ ಶಕ್ತಿ ತಂತ್ರಜ್ಞಾನ ಕಂಪನಿಗಳಿಗೆ ಇದೆ ಎಂದಾಯ್ತು.