ದಿನಭವಿಷ್ಯ: ನಿಮಗಾಗಿ ಇತರರು ಬದಲಾಗಬೇಕು ಎನ್ನುವ ಹಠ ಬಿಟ್ಟುಬಿಡಿ!

ಮಂಗಳವಾರ, 1 ಮಾರ್ಚ್ 2022

ಮೇಷ
ನಿಮ್ಮ ಜೀವನ ಉತ್ತಮಪಡಿಸುವುದು ನಿಮ್ಮ ಗುರಿಯಾಗಲಿ. ಅದನ್ನು ಸಾಧಿಸಲು ಪ್ರಯತ್ನಪಡಿ. ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಿ.

ವೃಷಭ
ನಿಮಗಾಗಿ ಇತರರು ಬದಲಾಗಬೇಕು ಎಂಬ ಭಾವನೆ ಬಿಡಿ. ನೀವೂ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು. ಆರ್ಥಿಕ ಸ್ಥಿರತೆ

ಮಿಥುನ
ಕೆಲಸದಲ್ಲಿ ಸಫಲತೆ ಸಾಧಿಸಲು ಹೆಚ್ಚು ಶ್ರಮಪಡಬೇಕು. ಉದಾಸೀನತೆ ಬಿಟ್ಟುಬಿಡಿ. ಇಂದಿನ ಕೆಲಸವನ್ನು ಇಂದೇ ಮಾಡಿರಿ.

ಕಟಕ
ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಸ್ವಲ್ಪ ತಾಳ್ಮೆ ತಂದುಕೊಳ್ಳಿ. ಪರಿಸ್ಥಿತಿಯು ತಾನಾಗಿ ತಿಳಿಯಾಗುವುದು. ಮಕ್ಕಳ ಸಂಗದಲ್ಲಿ ಕುಶಿ ಪಡುವಿರಿ.

ಸಿಂಹ
ಮನೆಯ ಒಳಹೊರಗಿನ ಕುರಿತಂತೆ ಹೆಚ್ಚು ಆಸ್ಥೆ ವಹಿಸಬೇಕಾದ ಪ್ರಸಂಗ ಒದಗುವುದು. ಆಪ್ತರಿಂದ ನೆರವು. ವಿದ್ಯಾರ್ಥಿಗಳಿಗೆ ಯಶಸ್ಸು.

ಕನ್ಯಾ
ಭಾವನಾತ್ಮಕವಾಗಿ ಹೆಚ್ಚು ನಿಯಂತ್ರಣ ಸಾಧಿಸಿ. ಸಣ್ಣ ವಿಷಯಗಳಿಗೂ ಉದ್ವಿಗ್ನಗೊಳ್ಳುವುದು ತರವಲ್ಲ. ಇತರರನ್ನು ಅವರ ಮಾತಿನಿಂದಷ್ಟೆ ಅಳೆಯಬೇಡಿ.

ತುಲಾ
ಹಲವಾರು ಕೌಟುಂಬಿಕ ವಿಷಯಗಳನ್ನು ಇಂದು ಇತ್ಯರ್ಥಪಡಿಸಲು ಆದ್ಯತೆ ಕೊಡುವಿರಿ. ಇದಕ್ಕೆ ಕುಟುಂಬ ಸದಸ್ಯರ ಸಹಕಾರವೂ ಒದಗುವುದು.

ವೃಶ್ಚಿಕ
ನಿಮ್ಮ ಆಶಾವಾದಿ ಮತ್ತು ಗುಣಾತ್ಮಕ ಸ್ವಭಾವವು ಎಲ್ಲರಿಂದ ಮೆಚ್ಚಲ್ಪಡುವುದು. ನಿಮ್ಮ ಗುರಿಸಾಧನೆಗೂ ಇದು ನೆರವಾಗುವುದು. ಆರ್ಥಿಕ ಲಾಭ.

ಧನು
ಕೆಲವರ ಜತೆ ಸಂಘರ್ಷ ಉಂಟಾದೀತು. ಕೆಲವರು ಓನಿಮ್ಮ ಪಕ್ಷವನ್ನು ವಹಿಸುವರು. ಆದರೆ ಸಂಘರ್ಷವು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ.

ಮಕರ
ಕಾರ್ಯದಲ್ಲಿ ಅಡ್ಡಿಗಳು. ಇದರಿಂದ ಉತ್ಸಾಹಕ್ಕೆ ಕುಂದು. ಮನೆಯಲ್ಲಿನ ವಾತಾವರಣವು ನಿಮಗೆ ನೆರವಾಗುವುದು. ಆಪ್ತರ ಸಂಗದಲ್ಲಿ ಸಂತೋಷ ಕಾಣುವಿರಿ.

ಕುಂಭ
ವೈಯಕ್ತಿಕವಾಗಿ ಯಾರನ್ನೂ ಹಳಿಯಲು ಹೋಗಬೇಡಿ. ಅದು ವಿಪರೀತ ಪರಿಣಾಮಕ್ಕೆ ಕಾರಣವಾದೀತು. ಮಾತು, ನಡೆಯಲ್ಲಿ ಸಂಯಮವಿರಲಿ.

ಮೀನ
ಆರೋಗ್ಯ ಸಂಬಂಧಿ ಸಮಸ್ಯೆಯಿಂದ ನಿರಾಳತೆ ಪಡೆಯುವಿರಿ. ಧಾರ್ಮಿಕ ಕಾರ್ಯ ದಲ್ಲಿ ಹೆಚ್ಚು ಆಸಕ್ತಿ. ಆರ್ಥಿಕ ಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!