ಕೊಲಂಬಿಯಾದಲ್ಲಿದೆ ಉಲ್ಟಾ ಮನೆ: ಮನೆಯೊಳಕ್ಕೆ ಕಾಲಿಟ್ಟಾಗ ತಲೆ ಸುತ್ತೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬಿಯಾದಲ್ಲಿ ಉಲ್ಟಾ ಮನೆ ಇದೆ!
ಹೌದು, ಕೆಲವೊಂದು ವಿಚಿತ್ರಗಳನ್ನ ನೀವು ನಂಬಲೇಬೇಕು. ಕೊಲಂಬಿಯಾದ ಬೊಗೋಟಾ ಪ್ರದೇಶದಲ್ಲಿ ಉಲ್ಟಾ ಮನೆ ಕಟ್ಟಲಾಗಿದೆ. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಇಲ್ಲಿ ಮನೆ ನಿರ್ಮಿಸಲಾಗಿದ್ದು, ಇದರ ಫೋಟೊ, ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.

ಈ ಮನೆಯನ್ನು ನೋಡಲು ಪ್ರವಾಸಿಗರ ದಂಡು ಬೊಗೋಟಾಗೆ ಬರುತ್ತಿದೆ. ಆಪ್ಟಿಕಲ್ ಇಲ್ಯೂಷನ್ ಉಂಟುಮಾಡುವ ಮನೆ ಇದಾಗಿದ್ದು, ಈ ಮನೆಯ ಫೋಟೊವನ್ನು ಡ್ರೋನ್ ಮೂಲಕ ಹೆರ್ನಾಂಡೊ ರೊಜೊ ರೊಡ್ರಿಗಸ್ ಎನ್ನುವ ಫೋಟೊಗ್ರಾಫರ್ ಚಿತ್ರೀಕರಣ ಮಾಡಿದ್ದಾರೆ. ಉಲ್ಟಾ ಕಾಣುವ ಈ ಮನೆಯನ್ನು ಲಾ ಕಾಸಾ ಲೋಕಾ ಎಂದು ಕರೆಯಲಾಗುತ್ತದೆ. ಕೊಲಂಬಿಯಾದ ಗುವಿಯೋನ ಸಾಂಟಾ ಮರಿಯಾ ಡಿ ಗುಟಾವಿಟಾ ಗ್ರಾಮದಲ್ಲಿ ಫ್ರಿಟ್ಜ್ ಶಾಲ್ ಈ ಮನೆ ನಿರ್ಮಿಸಿದ್ದಾರೆ.

ಬಹಳ ವರ್ಷಗಳಿಂದ ಫ್ರಿಟ್ಜ್ ಶಾಲ್ ಈ ರೀತಿ ಮನೆ ಕಟ್ಟುವ ಆಲೋಚನೆ ಹೊಂದಿದ್ದರು, ರಜೆ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಮನೆಯ ಮಹಡಿ ನೆಲಕ್ಕೆ ಇದೆ, ಕಾರ್ ಪಾರ್ಕಿಂಗ್ ಮೇಲಿದೆ. ಈ ಮನೆ ಐದು ಡಿಗ್ರಿ ಎಡಕ್ಕೆ ಮತ್ತು ಐದು ಡಿಗ್ರಿ ಹಿಂದಕ್ಕೆ ವಾಲುತ್ತದೆ. ಮನೆಯೊಳಗೆ ಪ್ರವೇಶಿಸಿದಾಗ ತಲೆ ಸುತ್ತಿದ ಅನುಭವವೂ ಆಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!