ಹೊಸದಿಗಂತ ವರದಿ, ಅಂಕೋಲಾ :
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇತ್ತೀಚೆಗೆ ದುರಂತ ಅನುಭಸಿದ ಉಳುವರೆ ಗ್ರಾಮದ 46 ಕುಟುಂಬಗಳಿಗೆ 11.26 ಲಕ್ಷ ರೂ. ಸಹಾಯ ವಿತರಿಸಲಾಯಿತು.
ಅವರು ಶನಿವಾರ ಇಲ್ಲಿಯ ಹಾಲಕ್ಕಿ ಸಮಾಜ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ನಡೆದ ಗಾಂಧಿ ಸ್ಮ್ರತಿ ಮತ್ತು ವ್ಯಸನ ಮುಕ್ತರ ಅಭಿನಂದನಾ ಸಮಾರಂಭದಲ್ಲಿ ಚೆಕ್ ವಿತರಣೆ ನಡೆಯಿತು.
ದುರಂತದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ 6 ಮನೆಗಳ ಮಾಲಕರಿಗೆ ತಲಾ 1 ಲಕ್ಷ ರೂ. ಚೆಕ್ ವಿತರಿಸಲಾಯಿತು. ಸುಜ್ಞಾನ ನಿಧಿ ವಿತರಣೆ , ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ ಜರುಗಿತು.
ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರದಲ್ಲಿ ಈ ಪರಿಹಾರ ಮಂಜೂರು ಮಾಡಿದ್ದಾರೆ.
ಮಾಜಿ ಶಾಸಕ,ಜನಜಾಗೃತಿ ಸಮಿತಿ ಸದಸ್ಯ ಗಂಗಾಧರ ಭಟ್ಟ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ ,ಪಿಎಸ್.ಐ ಉದ್ದಪ್ಪ ಧರೆಪ್ಪನವರ್ ,
ನ್ಯಾಯವಾದಿ ಉಮೇಶ ನಾಯ್ಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ವಾಸುದೇವ ನಾಯಕ , ಸದಸ್ಯರಾದ ಕೃಷ್ಣ ಕಾಮತ್, ಕೆ.ಆರ್. ನಾಯಕ ಮಾತನಾಡಿದರು.
ಅಧ್ಯಕ್ಷತೆಯನ್ನುಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಮಹೇಶ ನಾಯ್ಕ ವಹಿಸಿದ್ದರು.
ಯೋಜನಾಧಿಕಾರಿ ಮಮತಾ ನಾಯ್ಕ ಸ್ವಾಗತಿಸಿದರು. ನವಜೀವನ ಸಮಿತಿಯ ಸೂರಜ್ ಬಾನಾವಳಿಕರ್, ರಾಜು ನಾಯ್ಕ ಅನಿಸಿಕೆ ಹೇಳಿದರು.ಯೋಜನಾಧಿಕಾರಿ ವಿನಾಯಕ ನಾಯ್ಕನಿರೂಪಿಸಿದರು. ಯೋಜನಾಧಿಕಾರಿ ಕಲ್ಮೇಶ ಗೌಡ ವಂದಿಸಿದರು.