Wednesday, September 28, 2022

Latest Posts

ಉತ್ತರ ಕರ್ನಾಟಕದ ಅಭಿವೃದ್ದಿಗೆ ಗಟ್ಟಿ ಧ್ವನಿಯಾಗಿದ್ದ ಉಮೇಶ್ ಕತ್ತಿ

ಹೊಸದಿಗಂತ ವರದಿ,ಗದಗ :

ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ ರಾಜೀನಾಮೆಗೂ ಸಿದ್ಧ ಎಂದು ನೇರ ನಿಷ್ಟುರವಾಗಿ ಪ್ರತಿಪಾಧಿಸುತ್ತಿದ್ದ ಉತ್ತರ ಕರ್ನಾಟಕದ ಅಭಿವೃದ್ದಿಗೆ ಬೆನ್ನೆಲಬಾಗಿದ್ದ ಸಚಿವ ಉಮೇಶ ಕತ್ತಿ ಅವರ ನಿಧನದಿಂದಾಗಿ ಈ ಭಾಗದ ಗಟ್ಟಿ ಧ್ವನಿ ಕ್ಷೀಣಿಸಿದಂತಾಗಿದೆ.

ಆ.೨೬ ರಂದು ಗದಗ ನಗರಕ್ಕೆ ಬೇಟಿ ಅವರ ಜೀವನದ ಕೊನೆಯ ಬೇಟಿಯಾಗಿರುವುದು ದುರ್ದೈವವಾಗಿದೆ. ಆ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದರೆ ರಾಜೀನಾಮೆಗೆ ಸಿದ್ದ ಎಂದು ಉತ್ತರ ಕರ್ನಾಟಕ ಪರವಾಗಿ ಮತ್ತೊಮ್ಮೆ ಗುಡುಗಿದ್ದರು. ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು. ಉತ್ತರ ಕರ್ನಾಟಕ ವಿಷಯವಾಗಿ ಮಾಧ್ಯಮದವರು ಸ್ಪಂಧಿಸಬೇಕು. ಅಭಿವೃದ್ಧಿ ನಿಂತರೆ ಹೋರಾಟ ಇದ್ದೇ ಇರುತ್ತೆ ಎಂದು ಅಚಲ ವಿಶ್ವಾಸವನ್ನು ವ್ಯಕ್ತ ಪಡೆಸಿದ್ದರು.

ಅಲ್ಲದೆ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಅಖಂಡ ಕರ್ನಾಟಕದ ಸಿಎಂ ಆಗುವ ಯೋಗ್ಯತೆ ನನಗಿದೆ. ಈಗ ನಮ್ಮವರೇ ಸಿಎಂ ಆಗಿರುವಾಗ ಈ ಬಗ್ಗೆ ಆಸೆ ಪಡುವದಿಲ್ಲ ಸಿಎಂ ಅವಕಾಶ ಬಂದರೆ ಅದೃಷ್ಠ ಅನ್ನಬೇಕು. ನಾನು ಬೆನ್ನು ಹತ್ತಿ ಹೋಗುವದಿಲ್ಲ ನಾನು ಹಿರಿಯ ರಾಜಕಾರಣಿ, ಅನುಭವ ಇದ್ದವನು, ಇನ್ನೂ ೧೫ ವರ್ಷ ರಾಜಕೀಯ ಜೀವನ ಇದೆ, ಭವಿಷ್ಯದಲ್ಲಿ ನೋಡೋಣ ಎಂದು ಸಚಿವ ಉಮೇಶ ಕತ್ತಿ ಅವರು ಆಡಿದ ಮಾತುಗಳು ಇನ್ನೂ ಬರಿ ನೆನಪುಗಳು ಮಾತ್ರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!