ಇಂದಿನಿಂದ 14ನೇ ಆವೃತ್ತಿಯ ಅಂಡರ್‌ 19 ಕ್ರಿಕೆಟ್ ವಿಶ್ವಕಪ್‌: ವೆಸ್ಟ್‌ ಇಂಡೀಸ್‌ ನಲ್ಲಿ ಭರ್ಜರಿ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಭೀತಿಯ ನಡುವೆ ವೆಸ್ಟ್‌ ಇಂಡೀಸ್‌ ನಲ್ಲಿ ಇಂದಿನಿಂದ 14ನೇ ಆವೃತ್ತಿಯ ಅಂಡರ್‌ -19 ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ.
ಫೆ.5ರವರೆಗೆ 4 ವಿವಿಧ ಕೆರಿಬಿಯನ್‌ ತಾಣಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಆಂಟಿಗಾ, ಗಯಾನಾ, ಸೆಂಟ್‌ ಕಿಟ್ಸ್‌ ಮತ್ತು ಟ್ರಿನಿಡಾಡ್‌ ನಲ್ಲಿ ಪಂದ್ಯಾವಳಿ ನಡೆಯಲಿದೆ.
ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳ ಜಿದ್ದಾಜಿದ್ದಿ ನಡೆಸಲಿದ್ದು, ಇವುಗಳನ್ನು 4 ಗುಂಪುಗಳಂತೆ ವಿಭಜನೆ ಮಾಡಲಾಗಿದೆ.
ಈಗಾಗಲೇ 2000, 2008, 2012 ಹಾಗೂ 2018ರಲ್ಲಿ ಅತಿ ಹೆಚ್ಚು ಬಾರಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಗಳಿಸಿರುವ ಭಾರತ ಬಿ ವಿಭಾಗದಲ್ಲಿದೆ. ಭಾರತದ ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಉಗಾಂಡ ಹಾಗೂ ಐರ್ಲೆಂಡ್‌ ಇದೆ.
ಭಾರತದ ತಂಡದಲ್ಲಿ ದೆಹಲಿಯ ಬ್ಯಾಟರ್‌ ಯಶ್‌ ಧುಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ಜ.15ರಂದು ದಕ್ಷಿಣ ಆಫ್ರಿಕಾ, ಜ.19 ಐರ್ಲೆಂಡ್‌, ಜ.22 ಉಗಾಂಡ ವಿರುದ್ಧ ಭಾರತ ಸಮರ ನಡೆಸಲಿದೆ.
ಪಂದ್ಯದ ಸಮಯ: ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯಾವಳಿಯನ್ನು ಸ್ಟಾರ್‌ ಸ್ಪೋರ್ಟ್ಸ್‌ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!