ರೈಸಿದ ಅಂಡರ್ ವಾಟರ್ ಮೆಟ್ರೋ: ಪ್ರಯಾಣಿಕರಿಂದ ಸಿಗುತ್ತಿದೆ ಈಗ ಭಾರೀ ಭರ್ಜರಿ ರೆಸ್ಪಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಹೂಗ್ಲಿ ನದಿಯ ಕೆಳಗೆ ಹಾದು ಹೋಗುವ ಹೌರಾ ಮೈದಾನ್-ಎಸ್‌ಪ್ಲೇನೇಡ್ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ಅಂಕಿ ಅಂಶಗಳ ಪ್ರಕಾರ, ಮೊದಲ ದಿನವೇ ಬರೋಬ್ಬರಿ 70 ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ಪೈಕಿ 23,444 ಜನರು ಹೌರಾ ಮೈದಾನದಲ್ಲಿ, 20,923 ಪ್ರಯಾಣಿಕರು ಹೌರಾದಲ್ಲಿ ರೈಲೇರಿದ್ದಾರೆ. ಅಂಡರ್ ವಾಟರ್ ರೈಲು ಪ್ರಯಾಣದ ಕುರಿತಾದ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ಸದ್ದು ಮಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!