ಬಂಟೀ ಔರ್ ಬಬ್ಲಿ ಚಿತ್ರದ ಕಜ್‌ರಾರೇಗೆ ಸ್ಟೆಪ್ ಹಾಕಿದ ‘ಶಿಕ್ಷಕಿ’ಗೆ ಸಾಗುತ್ತಿದೆ ನೆಟ್ಟಿಗರಿಂದ ‘ಸ್ಪೆಷಲ್ ಕ್ಲಾಸ್’!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾದ ಬಂಟೀ ಔರ್ ಬಬ್ಲಿ ಚಿತ್ರದ ಕಜ್‌ರಾರೇ ಹಾಡಿಗೆ ‘ಶಿಕ್ಷಕಿ’ಯೇ ಸ್ಟೆಪ್ ಹಾಕಿ ವೈರಲ್ ಆಗಿರುವ ವಿಡಿಯೋಗೆ ಸಂಬಂಧಿಸಿ ನೆಟ್ಟಿಗರು ‘ಸ್ಪೆಷಲ್ ಕ್ಲಾಸ್’ ತೆಗೆದುಕೊಳ್ಳುತ್ತಿದ್ದಾರೆ.
ಏನಿದೆ ವಿಡಿಯೋದಲ್ಲಿ?
ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯ ಹುಟ್ಟುಹಬ್ಬವನ್ನು ಶಾಲಾ ಕೊಠಡಿಯಲ್ಲಿ ಆಚರಿಸುತ್ತಿದ್ದಂತೆ ಇರುವ ವಿಡಿಯೋದಲ್ಲಿ ’ಜನ್ಮದಿನದ ಶುಭಾಶಯಗಳು ರಶ್ಮಿ ಮೇಡಂ’ ಎಂದು ಹಿಂದೆ ಹಸಿರು ಬೋರ್ಡ್ ಮೇಲೆ ಬರೆಯಲಾಗಿರುವುದು ಕಂಡುಬರುತ್ತಿದೆ. ಶಿಕ್ಷಕಿ ಎನ್ನಲಾಗುವ ಮಹಿಳೆ ಡ್ಯಾನ್ಸ್ ಮಾಡುತ್ತಿದ್ದರೆ ‘ವಿದ್ಯಾರ್ಥಿ’ಗಳು ಪ್ರೋತ್ಸಾಹಿಸುತ್ತಿರುವುದು ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಇದುವರೆಗೆ 80 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಇದೇ ವೇಳೆ ಈ ವೈರಲ್ ವಿಡಿಯೋ ನೋಡಿ ಕೆಲವು ನೆಟ್ಟಿಗರು ಗರಂ ಆಗಿದ್ದಾರೆ. ತರಗತಿಯೊಳಗೆ ಶಿಕ್ಷಕಿ ಮಕ್ಕಳೊಂದಿಗೆ ಐಟಂ ಹಾಡುಗಳಲ್ಲಿ ನೃತ್ಯ ಮಾಡುವ ಇಂತಹ ದಿನವನ್ನು ನಾವು ನೋಡಿರಲಿಲ್ಲ, ಒಂದು ಕಾಲದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಾದರಿಯಾಗಿದ್ದರು. ಆದರೆ ಇಂದು ಅವರೇ ಈ ರೀತಿ ಆಗಿದ್ದರೆ… ಎಂಬಿತ್ಯಾದಿ ಕಮೆಂಟ್‌ಗಳು ಎಗ್ಗಿಲ್ಲದೆ ಪೋಸ್ಟ್ ಆಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!