ಕಂಡುಕೇಳರಿಯದ ಸುಂಟರಗಾಳಿಗೆ ಕಂಗಾಲಾದ ಡ್ರ್ಯಾಗನ್: ದಕ್ಷಿಣ ಚೀನಾದಲ್ಲಿ ಪ್ರಳಯ ಸದೃಶ ಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಂಡುಕೇಳರಿಯದ ಸುಂಟರಗಾಳಿಗೆ ದಕ್ಷಿಣ ಚೀನಾ ತತ್ತರಿಸಿಹೋಗಿದೆ. ಬೈಯುನ್ ಜಿಲ್ಲೆಯಲ್ಲಿ ಏಕಾಏಕಿ ಕಾಣಿಸಿಕೊಂಡ ಗಾಳಿ, ಇದುವರೆಗೆ ಐವರನ್ನು ಬಲಿ ತೆಗೆದುಕೊಂಡಿದ್ದು, 33 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ. ಇಲ್ಲಿ ಗಾಳಿಯ ವೇಗ ಸೆಕೆಂಡ್‌ಗೆ 20 ಮೀಟರ್‌ನಷ್ಟಿತ್ತು ಎಂದು ಬೈಯುನ್ ಜಿಲ್ಲೆಯ ಲಿಯಾಂಗ್ವಿಯಾನ್ ಹಳ್ಳಿಯಲ್ಲಿರುವ ಹವಾಮಾನ ಕೇಂದ್ರ ದಾಖಲಿಸಿದೆ.

ಸುಂಟರಗಾಳಿಯ ಬೆನ್ನಿಗೇ ದಕ್ಷಿಣ ಚೀನಾದಾದ್ಯಂತ ಭಾರೀ ಮಳೆ ರಂಭವಾಗಿದ್ದು, ಇದು ಇನ್ನಷ್ಟು ಅಬಾಹುತಗಳನ್ನು ತಂದಿಡುತ್ತಿದೆ. ಈಗಾಗಲೇ ಹಲವೆಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!