ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.
ಇದರ ನಡುವೆ ಈ ಟ್ರೋಫಿ ಗೆಲ್ಲಿಸಿಕೊಟ್ಟ ದ್ರೋಣಾಚಾರ್ಯ ರಾಹುಲ್ ದ್ರಾವಿಡ್ ಗೆಲುವಿನ ಬಳಿಕ ಆಡಿದ ಮಾತುಗಳು ಬಾರಿ ಸಂಚಲನ ಸೃಷ್ಟಿಸಿದೆ. ಮುಂದಿನ ವಾರದಿಂದ ನಾನು ನಿರುದ್ಯೋಗಿ, ಯಾವುದಾದರು ಆಫರ್ ಇದೆಯಾ ಎಂದು ದ್ರಾವಿಡ್ ಪ್ರಶ್ನಿಸಿದ್ದಾರೆ. ದ್ರಾವಿಡ್ ಮಾತಿನ ಬೆನ್ನಲ್ಲೇ ಇದೀಗ ಆಫರ್‌ಗಳ ಸುರಿಮಳೆಯಾಗಿದೆ.
ಕೋಚ್ ಆಗಿ ರಾಹುಲ್ ದ್ರಾವಿಡ್ ಕೊನೆಯ ಸರಣಿ ಇದಾಗಿತ್ತು. ಭರ್ಜರಿ ಗೆಲುವಿನೊಂದಿಗೆ ದ್ರಾವಿಡ್ ಕೋಚಿಂಗ್‌ಗೆ ವಿದಾಯ ಹೇಳಿದ್ದಾರೆ. ರಾಹುಲ್ ದ್ರಾವಿಡ್ ತನ್ನ ಕ್ರಿಕೆಟ್ ಕರಿಯರ್‌ನ್ನು ಟ್ರೋಫಿ ಇಲ್ಲದೆ ಅಂತ್ಯಗೊಳಿಸಿದ್ದರು. ಕೋಚಿಂಗ್ ಅವಧಿಯಲ್ಲಿ ಏಕದಿನ ವಿಶ್ವಕಪ್, ಟಿ20, ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ ಪ್ರಮುಖ ಸರಣಿಗಳಲ್ಲೂ ಫೈನಲ್ ಹಂತದಲ್ಲಿ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿತ್ತು. ಹೀಗಾಗಿ ದ್ರಾವಿಡ್ ಕೋಚ್ ಆಗಿ ಕೊನೆಯ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ದ್ರಾವಿಡ್ ಕಾರಣಕ್ಕೂ ಪ್ರಮುಖವಾಗಿತ್ತು. ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ.
https://x.com/_monkinthecity_/status/1807297110284620020?ref_src=twsrc%5Etfw
ಮುಂದಿನ ವಾರದಿಂದ ನಿಮಗೆ ಯಾವುದೇ ಜವಾಬ್ದಾರಿಗಳಿಲ್ಲ, ನೀವು ನಿರಾಳ ಎಂದು ಕೇಳಿದಾಗ , ಹೌದು ಮುಂದಿನ ವಾರದಿಂದ ನಾನು ನಿರುದ್ಯೋಗಿ, ಯಾವುದಾದರೂ ಆಫರ್ ಇದೆಯಾ ಎಂದು ಮರು ಪ್ರಶ್ನಿಸಿದ್ದಾರೆ. ದ್ರಾವಿಡ್ ಈ ಮಾತುಗಳು ಭಾರಿ ವೈರಲ್ ಆಗಿದೆ. ಹಲವರು ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ತಂಡಕ್ಕೆ ಕೋಚ್ ಮಾಡಿ, 16 ವರ್ಷಗಳ ಟ್ರೋಫಿ ಬರ ನೀಗಿಸಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಕೆಲವರು ಕರ್ನಾಟಕ ಕ್ರಿಕೆಟ್ ತಂಡದ ಕೋಚ್ ಮಾಡಿ ಎಂದು ಸಲಹೆ ನೀಡಿದ್ದಾರೆ.