ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು

ಹೊಸದಿಗಂತ ವರದಿ, ವಿಜಯಪುರ:

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ- ನಾಲತವಾಡ ರಸ್ತೆಯ ಹಿರೇಮುರಾಳ ಗ್ರಾಮದ ಹತ್ತಿರ ಅಡವಿ ಸೋಮನಾಳ ಕ್ರಾಸನಲ್ಲಿ ನಡೆದಿದೆ.

ಮೃತನನ್ನು ತಾಳಿಕೋಟೆ ತಾಲೂಕು ಮೂಕಿಹಾಳ ಗ್ರಾಮದ ರಾಜು ಮೂಕಿಹಾಳ (23) ಎಂದು ಗುರ್ತಿಸಲಾಗಿದೆ.

ರಾಜು ಮೂಕಿಹಾಳ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಯಾವುದೋ ಭಾರಿ ವಾಹನವೇ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!