ಸುಳ್ಯ ತಾಲೂಕಿನ ಕೂಜಿಮಲೆ ಎಸ್ಟೇಟ್‌ನಲ್ಲಿ ಅಪರಿಚಿತ ಮಹಿಳೆ: ಮತ್ತೆ ಕೂಂಬಿಂಗ್ ತೀವ್ರಗೊಳಿಸಿದ ಎಎನ್‌ಎಫ್

ಹೊಸದಿಗಂತ, ಮಂಗಳೂರು:

ಅಪರಿಚಿತ ಮಹಿಳೆಯೋರ್ವರು ಕಾಣಿಸಿಕೊಂಡ ವದಂತಿಗಳ ಬೆನ್ನಲ್ಲೇ ದಕ್ಷಿಣ ಕನ್ನಡ – ಕೊಡಗು ಜಿಲ್ಲೆಗಳ ಗಡಿಭಾಗ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ತನ್ನ ಕೂಂಬಿಂಗ್ ಇನ್ನಷ್ಟು ತೀವ್ರಗೊಳಿಸಿದೆ.

ಸುಳ್ಯ ತಾಲೂಕಿಗೆ ಬರುವ ಕಲ್ಮಕಾರು ಸಮೀಪದಲ್ಲಿಯೇ ಈ ಕೂಜಿಮಲೆ ಎಸ್ಟೇಟ್ ಇದೆ. ಇಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ ಅಪರಿಚಿತ ಮಹಿಳೆಯೋರ್ವರು ಎಸ್ಟೇಟ್‌ನ ರಬ್ಬರ್ ತೋಟದಲ್ಲಿ ತೆರಳುತ್ತಿರುವುದನ್ನು ಕೆಲವರು ನೋಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅವರು ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಬೆನ್ನಿಗೇ ಶೋದ ಕಾರ್ಯ ತೀವ್ರಗೊಂಡಿದ್ದು ಇದುವರೆಗೆ ಯಾವುದೇ ಸುಳುವು ಸಿಕ್ಕಿಲ್ಲ. ಈ ಮಹಿಳೆ ರಬ್ಬರ್ ತೋಟದ ಮೂಲಕ ಅರಣ್ಯ ಪ್ರದೆಶದತ್ತ ತೆರಳಿರಬೇಕು ಎಂಬ ಶಂಕೆ ಸ್ಥಳೀಯ ವಲಯದಲ್ಲಿ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!