ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸಚಿವ ಸಂಪುಟ ಇಂದು ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ ಮಾಡಿದೆ.
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುವ ಮಸೂದೆ ಇದಾಗಿದೆ. ಯಾವುದೇ ಜಾತಿ, ಧರ್ಮ ಹಾಗೂ ಪ್ರಾಂತ್ಯದ ಬೇಧವಿಲ್ಲದೆ ದೇಶದ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ.
ಪ್ರಸ್ತುತ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸೇರಿದಂತ ಎವಿವಿಧ ಧರ್ಮಗಳಿಗೆ ಅವುಗಳದ್ದೇ ಆದ ಕಾನೂನುಗಳಿವೆ. ಅವೆಲ್ಲವೂ ಏಕರೂಪ ಕಾಯಿದೆ ಅಡಿಯಲ್ಲಿ ಬರಲಿವೆ. ಮಸೂದೆ ಮಂಡನೆಗೆ ಒಪ್ಪಿಗೆಯೂ ಸಿಕ್ಕಿದೆ. ಬಿಜೆಪಿ ಆಡಳಿತದ ಉತ್ತರಾಂಖಡ ರಾಜ್ಯ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವಾಗಿದೆ.