ಇಂದು ಕೇಂದ್ರ ಬಜೆಟ್: ಮಂಡನೆಗೂ ಮುನ್ನ ಹೇಗಿತ್ತು ಇದುವರೆಗಿನ ಸಿದ್ಧತೆಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧ್ಯಾಹ್ನ 11 ಗಂಟೆಗೆ ಜಂಟಿ ಸದನದಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್ ಮಂಡನೆಗೂ ಮುನ್ನ ಏನೇನು ಸಿದ್ಧತೆಗಳು ನಡೆದಿದ್ದವು?
ಇಲ್ಲಿದೆ ಪುಟ್ಟ ಸಿಂಹಾವಲೋಕನ…

ಸಾಮಾನ್ಯವಾಗಿ ಆರು ತಿಂಗಳ ಹಿಂದಿನಿಂದಲೇ ಬಜೆಟ್ ತಯಾರಿ ಆರಂಭವಾಗಿದೆ. ಜ. 24ರಂದು ಹಲ್ವಾ ತಯಾರಿ ಕಾರ್ಯಕ್ರಮ ನಡೆದಿತ್ತು. ಬಳಿಕ ಜ. 29 ರಂದು ಆರ್ಥಿಕ ಸಮೀಕ್ಷಾ ವರದಿ ಬದಲು ಆರ್ಥಿಕ ಪರಾಮರ್ಶೆ ವರದಿ ನಡೆದಿತ್ತು. ಬಳಿಕ ನಡೆದಿದ್ದು ಜ. 30ರಂದು ಕೇಂದ್ರ ಸರ್ಕಾರದಿಂದ ಸರ್ವಪಕ್ಷ ಸಭೆ. ಅದಾದ ಬಳಿಕ ಜ. 31 ರಂದು ಬಜೆಟ್ ಸೆಷನ್ ಆರಂಭವಾಗಿದೆ. ರಾಷ್ಟ್ರಪತಿಗಳಿಂದ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ನಡೆದಿದೆ.

ಇಂದು (ಫೆ. 1) ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮ್ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಸುಮಾರು 2 ತಾಸುಗಳ ಬಜೆಟ್ ಭಾಷಣದ ನಿರೀಕ್ಷೆಯಿದೆ. ಮುಂದೆ ಫೆ. 9ರಂದು ಬಜೆಟ್ ಸೆಷನ್ ಮುಕ್ತಾಯವಾಗಲಿದ್ದು, ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಹೊಸ ಸರ್ಕಾರ ರಚನೆಯಾದ ಬಳಿಕ ಜೂನ್ ಅಥವಾ ಜುಲೈ ತಿಂಗಳಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!