ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟೆಕ್ಷನ್‌ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ನಾಗರಿಕರ ಡಿಜಿಟಲ್‌ ಡೇಟಾ ರಕ್ಷಣೆಗಾಗಿ ಕೇಂದ್ರ ಸರ್ಕಾರ ದ್ಧಪಡಿಸಿರುವ ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟೆಕ್ಷನ್‌ ವಿಧೇಯಕಕ್ಕೆ (Data Protection Bill) ಸಚಿವ ಸಂಪುಟ ಸಭೆಯು ಬುಧವಾರ ಅನುಮೋದನೆ ನೀಡಿದೆ.

ಇನ್ನು ಜುಲೈ 20ರಿಂದ ಆರಂಭವಾಗುವ ಸಂಸತ್‌ ಮುಂಗಾರು ಅಧಿವೇಶನದಲ್ಲಿ ನೂತನ ವಿಧೇಯಕವನ್ನು ಎರಡೂ ಸದನಗಳಲ್ಲಿ ಮಂಡಿಸಿ, ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಕೇಂದ್ರ ಸರ್ಕಾರವು ಇದಕ್ಕೂ ಮೊದಲು ವೈಯುಕ್ತಿಕ ಮಾಹಿತಿ ರಕ್ಷಣಾ ವಿಧೇಯಕ-2019 ರಚಿಸಿ, ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ, ವಿಧೇಯಕದಲ್ಲಿ 81 ತಿದ್ದುಪಡಿಗಳಿಗೆ ಜಂಟಿ ಸಂಸದೀಯ ಸಮಿತಿಯು ಸೂಚಿಸಿದ ಹಿನ್ನೆಲೆಯಲ್ಲಿ ಹಾಗೂ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಧೇಯಕವನ್ನು ಹಿಂಪಡೆದಿತ್ತು. ಆದರೆ, ಸಾರ್ವಜನಿಕರು, ತಜ್ಞರು ಸೇರಿ ಹಲವರಿಂದ ಮಾಹಿತಿ ಸಂಗ್ರಹಿಸಿ ನೂತನ ವಿಧೇಯಕವನ್ನು ರಚಿಸಲಾಗಿದೆ.

ಏನಿದು ಡೇಟಾ ಪ್ರೊಟೆಕ್ಷನ್‌ ಬಿಲ್?‌
ದೇಶದಲ್ಲಿ ಇಂದು ನಾಗರಿಕರು ಸ್ಮಾರ್ಟ್‌ ನತ್ತ ಸಾಗುತ್ತಿದ್ದು,ಈ ಕ್ಷಣ ಡಿಜಿಟಲ್‌ ನಾಗರಿಕರ ವೈಯಕ್ತಿಕ ಮಾಹಿತಿಯ ರಕ್ಷಣೆಗಾಗಿ ಕಾನೂನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಸಿದ್ಧಪಡಿಸಿರುವುದೇ ಡಿಜಿಟಲ್‌ ಪರ್ಸನಲ್‌ ಡೇಟಾ ಪ್ರೊಟಕ್ಷನ್‌ ವಿಧೇಯಕ ಆಗಿದೆ.

ದೇಶದ ನಾಗರಿಕರ ಡಿಜಿಟಲ್‌ ಮಾಹಿತಿ ಸಂಗ್ರಹ, ಬಳಕೆದಾರರ ಹಕ್ಕುಗಳು, ಕರ್ತವ್ಯಗಳು, ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಅಪರಾಧಗಳು ನಡೆದಾಗ ಬೇರೆ ದೇಶಗಳಿಗೆ ಡಿಜಿಟಲ್‌ ಡೇಟಾ ಟ್ರಾನ್ಸ್‌ಫರ್‌, ಬೇರೆ ದೇಶಗಳಿಂದ ಡೇಟಾ ಪಡೆಯುವುದು, ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಸೇರಿ ನೂತನ ವಿಧೇಯಕವು ಹತ್ತಾರು ಅಂಶಗಳನ್ನು ಹೊಂದಿದೆ.

2018ರಲ್ಲಿ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಪರಿಣಿತ ಸಮಿತಿ ಈ ಮಸೂದೆಯನ್ನು ರೂಪಿಸಿತ್ತು. ಕೇಂದ್ರ ಸರ್ಕಾರವು 2019 ರಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಅದನ್ನು ಅದೇ ವರ್ಷ ಡಿಸೆಂಬರ್‌ನಲ್ಲಿ ಜಂಟಿ ಸಂಸದೀಯ ಸಮಿತಿಯ ಮುಂದಿಡಲಾಯಿತು. ಸಮಿತಿಯ ವರದಿಗೆ ತಿದ್ದುಪಡಿ ಸೂಚಿಸಿದ ನಂತರ ಡಿಸೆಂಬರ್ 2021 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಕೊನೆಗೆ ಮೊದಲ ವಿಧೇಯಕವನ್ನು ಹಿಂಪಡೆಯಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!