ಸಂಸತ್​​ನಲ್ಲಿ ವಿಪಕ್ಷಗಳಿಂದ NEET ಗದ್ದಲ: ನಾವು ಯಾರನ್ನೂ ಬಿಡುವುದಿಲ್ಲ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

NEET ಮತ್ತು ಯುಜಿಸಿ-ನೆಟ್ ಪರೀಕ್ಷೆ (UGC-NET) ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಸಂಸತ್​​ನಲ್ಲಿ ಇಂದು ಪಟ್ಟು ಹಿಡಿದಿದ್ದು, ಆದ್ರೆ ಅದಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ. ಸದನದಲ್ಲಿ ಗದ್ದಲವುಂಟಾಗಿ ಸ್ಪೀಕರ್ ಸೋಮವಾರದವರೆಗೆ ಕಲಾಪವನ್ನು ಮುಂದೂಡಿದ್ದಾರೆ.

ಏತನ್ಮಧ್ಯೆ ನೀಟ್ ಕುರಿತಾದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ‘ಸರ್ಕಾರವು ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಾಗಿದೆ, ಆದರೆ ಎಲ್ಲವೂ ಸಂಪ್ರದಾಯ ಮತ್ತು ಸೌಭ್ಯತೆಯಲ್ಲಿ ನಡೆಯಬೇಕು. ನಿನ್ನೆ ತಮ್ಮ ಭಾಷಣದಲ್ಲಿ ಸ್ವತಃ ರಾಷ್ಟ್ರಪತಿಗಳು ಪರೀಕ್ಷೆಯ ಬಗ್ಗೆ ಮಾತನಾಡುವಾಗ, ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂಬ ಸರ್ಕಾರದ ಉದ್ದೇಶವನ್ನು ತೋರಿಸಿದೆ. ಸರ್ಕಾರದ ಜವಾಬ್ದಾರಿ ದೇಶದ ಯುವಕರ ಕಡೆಗಿದೆ, ದೇಶದ ವಿದ್ಯಾರ್ಥಿಗಳ ಕಡೆಗಿದೆ ಸರ್ಕಾರ ತನ್ನ ಪರವಾಗಿ ನಿಲ್ಲಲು ಸಿದ್ಧವಾಗಿದೆ, ಹಾಗಾದರೆ ಗೊಂದಲವೇನು? ನಾವು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಸಿಬಿಐ ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತದೆ., ನಾವು ಯಾರನ್ನೂ ಬಿಡುವುದಿಲ್ಲ, ಸುಧಾರಣೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆ ಎಲ್ಲಾ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲಾಗುವುದು. ರಾಜಕೀಯದಿಂದ ಹೊರಬಂದು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

‘ನಾವು ಯಾರನ್ನೂ ಬಿಡುವುದಿಲ್ಲ, ಎನ್‌ಟಿಎ ಉಸ್ತುವಾರಿ ವಹಿಸಿದ್ದವರನ್ನು ತೆಗೆದುಹಾಕಲಾಗಿದೆ ಮತ್ತು ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಇದೆಲ್ಲವೂ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಬೇಡಿ ಎಂದು ನಾನು ಪ್ರತಿಪಕ್ಷಗಳಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!