ಮಧ್ಯಪ್ರದೇಶ ಸರ್ಕಾರದ ‘ರಿಪೋರ್ಟ್‌ ಕಾರ್ಡ್‌’ನ್ನು ಬಿಡುಗಡೆಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶ ಸರ್ಕಾರದ 2003ರಿಂದ 2023ರ ವರೆಗಿನ ‘ರಿಪೋರ್ಟ್‌ ಕಾರ್ಡ್’ ಅನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಬಿಡುಗಡೆ ಮಾಡಿದ್ದು, ‘ಬಿಜೆಪಿ ಆಡಳಿತವು ರಾಜ್ಯವನ್ನು ಬಿಮಾರು ರಾಜ್ಯಗಳ ಪಟ್ಟಿಯಿಂದ ಹೊರ ತಂದಿದೆ ಎಂದು ಹೇಳಿದ್ದಾರೆ.

ಭೋಪಾಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಸಂಸದ ವಿ.ಡಿ. ಶರ್ಮಾ ಮತ್ತು ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರ ಸಮ್ಮುಖದಲ್ಲಿ ಶಾ ಅವರು 20 ವರ್ಷಗಳ ‘ರಿಪೋರ್ಟ್‌ ಕಾರ್ಡ್‌’ ನ್ನು ಬಿಡುಗಡೆಗೊಳಿಸಿದರು.

‘ಮಧ್ಯಪ್ರದೇಶವು 1956ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ 2003ರ ವರೆಗೆ ಐದರಿಂದ ಆರು ವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿದೆ. ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯವು ‘ಬಿಮಾರು’ ಪಟ್ಟಿಯಲ್ಲೇ ಉಳಿದಿತ್ತು’ ಎಂದು ಶಾ ಹೇಳಿದರು.

‘ಬಿಮಾರು’ ಸಂಕ್ಷಿಪ್ತ ಪದವನ್ನು ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳನ್ನು ಉಲ್ಲೇಖಿಸಲು ಬಳಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!