Wednesday, June 7, 2023

Latest Posts

ಎರಡು ದಿನಗಳ ಭೇಟಿಗೆ ನಾಳೆ ಅರುಣಾಚಲಕ್ಕೆ ಅಮಿತ್‌ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನಗಳ ಕಾಲ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಮೊದಲ ದಿನದಂದು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಗಡಿ ಗ್ರಾಮವಾದ ಕಿಬಿತೂದಲ್ಲಿ ‘ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ’ಕ್ಕೆ ಚಾಲನೆ ನೀಡಲಿದ್ದಾರೆ.

ಕೇಂದ್ರ ಗೃಹ ಸಚಿವರು ಕಿಬಿತೂದಲ್ಲಿ “ಗೋಲ್ಡನ್ ಜುಬಿಲಿ ಬಾರ್ಡರ್ ಇಲ್ಯುಮಿನೇಷನ್ ಪ್ರೋಗ್ರಾಂ” ಅಡಿಯಲ್ಲಿ ನಿರ್ಮಿಸಲಾದ ಅರುಣಾಚಲ ಪ್ರದೇಶ ಸರ್ಕಾರದ ಒಂಭತ್ತು ಮೈಕ್ರೋ ಹೈಡಲ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ವಿದ್ಯುತ್ ಯೋಜನೆಗಳು ಗಡಿ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲಿವೆ.

ಶಾ ಅವರು ಕಿಬಿತೂದಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಗಡಿ ಜಿಲ್ಲೆಗಳ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಏಪ್ರಿಲ್ 11 ರಂದು ಕೇಂದ್ರ ಗೃಹ ಸಚಿವರು ನಮ್ತಿ ಕ್ಷೇತ್ರಕ್ಕೆ ಭೇಟಿ ನೀಡಿ ವಾಲೋಂಗ್ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!