ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ: ವಾಹನ ಸವಾರರೇ ಗಮನಿಸಿ ಈ ಮಾರ್ಗದಲ್ಲಿ ಪ್ರಯಾಣ ನಿರ್ಬಂಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು (ಮಾರ್ಚ್ 23) ರಾತ್ರಿ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಗಮಿಸಲಿದ್ದು, ಶುಕ್ರವಾರ ಚುನಾವಣಾ ಪ್ರಚಾರವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಹೀಗಾಗಿ ಸಿಲಿಕಾನ್ ಸಿಟಿಯ ಕೆಲವು ಮಾರ್ಗಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಗಮನ ಹರಿಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bengaluru Traffic Police) ಪ್ರಕಟಣೆ ಹೊರಡಿಸಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಈ ಕೆಳಗೆ ಉಲ್ಲೇಖಿಸಿರುವ ಮಾರ್ಗಗಳಲ್ಲಿ ಸಂಚರಿಸದಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಹಳೆ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ಎನ್​ಆರ್ ರಸ್ತೆ, ನೃಪತುಂಗ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕೆಂಗೇರಿಯಿಂದ ಕೊಮ್ಮಘಟ್ಟ ರಸ್ತೆ, ರೇಸ್​ಕೋರ್ಸ್ ರಸ್ತೆ ಗಳಲ್ಲಿ ನಿರ್ಬಂಧ ಹೇರಲಾಗಿದೆ.

ಇನ್ನು ಕೆಲವು ರಸ್ತೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 4ರ ವರೆಗೆ ಲಘು, ಮಧ್ಯಮ ಹಾಗೂ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ರಸ್ತೆಗಳ ವಿವರ ಹೀಗಿದೆ;
ಟೌನ್​ಹಾಲ್​​ನಿಂದ ಎನ್​ಆರ್ ರಸ್ತೆ, ಮೈಸೂರು ರಸ್ತೆ ಕಡೆಗೆ
ನಾಯಂಡಹಳ್ಳಿಯಿಂದ ನಗರದ ಕಡೆಗೆ ಮತ್ತು ಕೆಂಗೇರಿ ಕಡೆಗೆ
ಕುಂಬಳಗೋಡಿನಿಂದ ಕೆಂಗೇರಿ (ನಗರದ ಕಡೆಗೆ)

ಅದೇ ರೀತಿ ಪರ್ಯಾಯ ಮಾರ್ಗಗಲಾಲ್ಜಿ ಇವುಗಳನ್ನು ಬಳಸಲು ಸೂಚಿಸಲಾಗಿದೆ. ಮೈಸೂರು ರಸ್ತೆ ಕಡೆಗೆ ತೆರಳಲು ಸರಕು ಸಾಗಣೆ ವಾಹನಗಳು ಎನ್​ಆರ್ ರಸ್ತೆ ಬದಲಾಗಿ ಲಾಲ್​ಬಾಗ್ ರಸ್ತೆ ಮೂಲಕ ಹೊಸೂರು ರಸ್ತೆ ನೈಸ್​ ರಸ್ತೆ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ನಾಯಂಡಹಳ್ಳಿ ಜಂಕ್ಷನ್​ನಿಂದ ನಗರದತ್ತ ತೆರಳುವ ಸರಕು ಸಾಗಣೆ ವಾಹನಗಳು ನಾಗರಭಾವಿ ಹಾಗೂ ಸುಮನಹಳ್ಳಿ ರಸ್ತೆ ಮೂಲಕ ಸಾಗುವಂತೆ ಸೂಚಿಸಲಾಗಿದೆ.
ನಗರದಿಂದ ಕುಂಬಳಗೋಡು ಮತ್ತು ಕೆಂಗೇರಿ ಕಡೆಗೆ ಸಾಗುವ ಸರಕು ಸಾಗಣೆ ವಾಹನಗಳು ನೈಸ್ ರಸ್ತೆ ಮೂಲಕ ಸಂಚರಿಸಬಹುದು ಎಂದು ಸಲಹೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!