ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾದ ನೇಹಾ ಹಿರೇಮಠ ಪೋಷಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ನೇಹಾ ಹಿರೇಮಠ ಕುಟುಂಬಸ್ಥರು ಬುಧವಾರ ಭೇಟಿಯಾದರು.

ಸಮಾವೇಶ ಮುಗಿದ ಬಳಿಕ ವೇದಿಕೆ ಹಿಂಭಾಗ ನೇಹಾ ಹಿರೇಮಠ (Neha Hiremath) ತಂದೆ, ತಾಯಿ ಹಾಗೂ ಸಹೋದರನನ್ನು ಶಾ ಭೇಟಿ ಮಾಡಿದರು.

ಭೇಟಿ ಬಳಿಕ ಮಾತನಾಡಿದ ನೇಹಾ ತಂದೆ, ನಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಬಹಳಷ್ಟು ಗಂಭೀರವಾಗಿದ್ದಾರೆ. ನಮ್ಮ ಜೊತೆಗೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಿಮ್ಮ ಪರವಾಗಿ ನಾವು ಇದ್ದೇವೆ ಅಂತಾ ಧೈರ್ಯ ಹೇಳಿದರು ಎಂದರು.

ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ಕಾಯ್ದೆ ತರಲು ಮನವಿ ಮಾಡಿದ್ದೇವೆ. ಈ ಬಗ್ಗೆ ಮನವಿ ಪತ್ರ ನೀಡಿದ್ದೇವೆ. ನಮ್ಮ ಮನವಿಗೆ ಅಮಿತ್‌ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!