ಮಾಲ್ಡೀವ್ಸ್-ಶ್ರೀಲಂಕಾಗೆ ಕೇಂದ್ರ ಸಚಿವ ಎಸ್. ಜೈಶಂಕರ್ ಪ್ರವಾಸ: ಅಭಿವೃದ್ಧಿಗಳ ಕುರಿತು ನಡೆಯಲಿದೆ ಪ್ರಮುಖ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಎರಡು ದ್ವೀಪ ರಾಷ್ಟ್ರಗಳಾದ ಮಾಲ್ಡೀವ್ಸ್ ಮತ್ತು ಶ್ರೀಲಂಕಾಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಂದಿನಿಂದ ಮೂರು ದಿನಗಳ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಮಾಲ್ಡೀವ್ಸ್‌ ಪ್ರವಾಸ ವೇಳೆ ಜೈಶಂಕರ್ ಅವರು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಭೇಟಿ ಮಾಡಲಿದ್ದು, ಚರ್ಚೆ ನಡೆಸಲಿದ್ದಾರೆ.

ಈ ವೇಳೆ ದ್ವಿಪಕ್ಷೀಯ ಅಭಿವೃದ್ಧಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಜೊತೆಗೆ ಭೂಸ್ಪರ್ಶ/ಉದ್ಘಾಟನೆ/ಹಸ್ತಾಂತರ ಮತ್ತು ಮಾಲ್ಡೀವ್ಸ್‌ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಹಲವು ಪ್ರಮುಖ ಭಾರತ-ಬೆಂಬಲಿತ ಯೋಜನೆಗಳ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ (MEA) ಕಚೇರಿ ತಿಳಿಸಿದೆ.

ಅದೇ ರೀತಿ ಜೈಶಂಕರ್ ಅವರು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್ ಗುಣವರ್ಧನರನ್ನು ಭೇಟಿ ಮಾಡಲಿದ್ದು, ವನಿಕಟ ಭಾರತ-ಶ್ರೀಲಂಕಾ ಸಹಭಾಗಿತ್ವದ ಸಂಪೂರ್ಣ ಹರವು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಬಲಪಡಿಸುವ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ವಿದೇಶಾಂಗ ಸಚಿವರ ಈ ಭೇಟಿಯು ಮಾಲ್ಡೀವ್ಸ್ ಮತ್ತು ಶ್ರೀಲಂಕಾದೊಂದಿಗಿನ ತನ್ನ ನಿಕಟ ಮತ್ತು ಸ್ನೇಹ ಸಂಬಂಧಗಳಿಗೆ ಭಾರತವು ನೀಡುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂಇಎ ಹೇಳಿಕೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!