ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಗಳು ಗೋವಾ ರೆಸ್ಟೋರೆಂಟ್​​​​ನ ಮಾಲೀಕರಲ್ಲ: ದೆಹಲಿ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಮಗಳು ಜೊಯಿಷ್ ಗೋವಾದಲ್ಲಿರುವ ರೆಸ್ಟೋರೆಂಟ್ ನ ಮಾಲೀಕರಲ್ಲ.ಅವರಿಗೆ ಪರವಾನಗಿ ನೀಡಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಅವರು ಯಾರು ಲೈಸನ್ಸ್ ಗಾಗಿ ಯಾವತ್ತೂ ಅರ್ಜಿ ಸಲ್ಲಿಸಿಲ್ಲ. ರೆಸ್ಟೋರೆಂಟ್ ಆಗಲೀ ಅಲ್ಲಿರುವ ಭೂಮಿಯಾಗಲೀ ಸ್ಮೃತಿ ಇರಾನಿ ಅಥವಾ ಅವರ ಮಗಳಿಗೆ ಸೇರಿದ್ದಲ್ಲ ಎಂದು ಹೈಕೋರ್ಟ್ ಹೇಳಿದೆ.
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಇತರರು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ ಮೇಲೆ ವೈಯಕ್ತಿಕ ಸುಳ್ಳು ಆರೋಪದ ಸಂಚು ರೂಪಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಅವರನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕ ನಿಂದನೆಗೆ ಒಳಪಡಿಸಲು, ನೈತಿಕ ಚಾರಿತ್ರ್ಯಹರಣ, ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರಲು ಕಾಂಗ್ರೆಸ್‌ ನ ಮೂವರು ನಾಯಕರು ದುರುದ್ದೇಶಪೂರಿತ ಹೇಳಿಕೆ ನೀಡಿದಂತಿದೆ ಎಂದು ಹೈಕೋರ್ಟ್ ಹೇಳಿದೆ.

ತಮ್ಮ ವಿರುದ್ಧ ಕಾಂಗ್ರೆಸ್ ತನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂದು ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟಾ ಡಿ ಸೋಜಾ ಅವರಿಗೆ ನೋಟಿಸ್ ಕಳುಹಿಸಿದ್ದರು. ಇದಾದ ನಂತರ ದೆಹಲಿ ಹೈಕೋರ್ಟ್ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿ ಸೋಜಾ ಅವರ ವಿರುದ್ದ ನೋಟಿಸ್ ನೀಡಿತ್ತು.
ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ 2 ಕೋಟಿ ನಷ್ಟ ಪರಿಹಾರ ನೀಡಬೇಕು ಎಂದು ಸ್ಮೃತಿ ಒತ್ತಾಯಿಸಿದ್ದರು. ಜೊತೆಗೆ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕಿ ಸ್ಮೃತಿ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!