ಖುದ್ದು ಕಾರಿಳಿದು ಬಂದು ಖರೀದಿಸಿ ರಸ್ತೆಬದಿಯ ಜೋಳ ಸವಿದ ಕೇಂದ್ರ ಸಚಿವರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ಮಂತ್ರಿಗಳು ಎಂದರೆ ಕೆಂಪು ಲೈಟಿನ ಕಾರು, ಬಿಗಿ ಬಂದೋಬಸ್ತ್ ಎಂಬೆಲ್ಲಾ ಚಿತ್ರಣ ಒಂದು ಕಾಲದಲ್ಲಿತ್ತು. ಆದರೆ ಕಾಲ ಬದಲಾಗಿದೆ ಇಂದಿನ ಕೇಂದ್ರ ಸಚಿವರುಗಳು ತಾವೆಷ್ಟು ಸಿಂಪಲ್, ತಾವೆಷ್ಟು ಜನರ ಹತ್ತಿರದಲ್ಲಿದ್ದೇವೆ ಎಂಬುದನ್ನು ಪದೇ ಪದೇ ತೋರಿಸಿಕೊಡುತ್ತಿದ್ದಾರೆ.
ಇಂತಹದ್ದೇ ಒಂದು ದೃಶ್ಯಾವಳಿ ಈಗ ಮತ್ತೆ ಕಾಣಲು ಸಿಕ್ಕಿದೆ. ಯಾವುದೋ ಕಾರ್ಯದ ನಿಮಿತ್ತ ತೆರಳುತ್ತಿದ್ದ ಉಕ್ಕು ಸಚಿವಾಲಯದ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ, ರಸ್ತೆಬದಿಯಲ್ಲಿ ಜೋಳ ಮಾರುತ್ತಿದ್ದ ಹುಡುಗನನ್ನು ಕಂಡು ವಾಹನ ನಿಲ್ಲಿಸಿ ತಾವೇ ಕೆಳಕ್ಕಿಳಿದುಬಂದು ಜೋಳ ಖರೀದಿಸಿದ್ದಾರೆ.

ಜೋಳಕ್ಕೆ ರೇಟೆಷ್ಟು ಎಂದು ಕೇಳಿದ ಸಚಿವರು, ಆತ15 ೧೫ ರೂ. ಎಂದಾಗ ಒಂದಿಷ್ಟು ಆತನ ಕಾಲೆಳೆದು ತಮಾಷೆಯ ಮಾತುಗಳನ್ನಾಡಿದ್ದಾರೆ. ಆತನ ಕಷ್ಟಸುಖ, ವ್ಯಾಪಾರದ ಬಗ್ಗೆ ಕೇಳಿ ಬಳಿಕ ಜೇಬಿನಿಂದ ದುಡ್ಡು ತೆಗೆದುಕೊಟ್ಟು ಆತನ ಬೆನ್ತಟ್ಟಿದ್ದಾರೆ. ಇದಲ್ಲದೆ ಈ ದೃಶ್ಯಾವಳಿಗಳನ್ನು ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ನಡುವೆ ಸಚಿವರ ಈ ಹಾಸ್ಯಚಟಾಕಿಯನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಂಡಿವೆ. ಇಂದು ಸಿಯೋನಿಯಿಂದ ಮಾಂಡ್ಲಾಗೆ ಹೋಗುತ್ತಿದ್ದೇನೆ. ಸ್ಥಳೀಯ ಜೋಳದ ರುಚಿ ನೋಡಿದೆವು. ನಾವೆಲ್ಲರೂ ಸ್ಥಳೀಯ ರೈತರು ಮತ್ತು ಅಂಗಡಿಯವರಿಂದ ಆಹಾರ ಪದಾರ್ಥಗಳನ್ನು ಖರೀದಿಸಬೇಕು. ಇದು ಅವರಿಗೆ ಉದ್ಯೋಗವನ್ನು ಮತ್ತು ಕಲಬೆರಕೆಯಿಲ್ಲದ ಸರಕುಗಳನ್ನು ಖಾತ್ರಿಗೊಳಿಸುತ್ತದೆ” ಎಂದು ಕುಲಸ್ತೆ ಗುರುವಾರ ಟ್ವೀಟ್ ಮಾಡಿದ್ದಾರೆ. ರಸ್ತೆ ಬದಿ ಮಾರಾಟಗಾರನ ಜತೆ ಸಚಿವರು ಚೌಕಾಸಿ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!