ನೂತನ ಉದ್ಯೋಗಿಗಳಿಗೆ ಅರ್ಧದಷ್ಟು ಸಂಬಳ ಕಡಿತಗೊಳಿಸಿದ ವಿಪ್ರೋ: ಸ್ವೀಕಾರಾರ್ಹವಲ್ಲ ಎಂದ ಐಟಿ ಒಕ್ಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಟಿ ಕಂಪನಿ ವಿಪ್ರೋ ತಮ್ಮ ಕಂಪನಿಗೆ ಸೇರಿದ ನೂತನ ಉದ್ಯೋಗಿಗಳಿಗೆ 50ರಷ್ಟು ವೇತನ ಕಡಿತಗೊಳಿಸುವುದಾಗಿ ಘೋಷಿಸಿ ಶಾಕ್ ನೀಡಿದೆ. ಈ ನಿರ್ಧಾರಕ್ಕೆ ಐಟಿ ನೌಕರರ ಸಂಘ (ಎನ್‌ಐಟಿಇಎಸ್) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿಪ್ರೋ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಸಂಘವು ಒತ್ತಾಯಿಸುತ್ತಿದೆ.

ಬೆಂಗಳೂರು ಮೂಲದ ವಿಪ್ರೋ ಕಳೆದ ವರ್ಷದ ಪದವೀಧರರನ್ನು ಫ್ರೆಶರ್‌ಗಳಾಗಿ ನೇಮಕ ಮಾಡಿಕೊಂಡಿದೆ. ಅವರು ಕಂಪನಿಯಿಂದ ತರಬೇತಿ ಪಡೆದು ಆನ್‌ಬೋರ್ಡಿಂಗ್‌ಗಾಗಿ ಕಾಯುತ್ತಿದ್ದಾರೆ. ಕಂಪನಿಯು ಅವರಿಗೆ ರೂ.6.5 ಲಕ್ಷ ವಾರ್ಷಿಕ ವೇತನವನ್ನು ಘೋಷಿಸಿದ್ದು, ಆದರೆ, ಈಗ ರೂ.3.5 ಲಕ್ಷ ಸಂಬಳಕ್ಕೆ ಕೆಲಸ ಮಾಡುವಂತೆ ಕಂಪನಿ ಕೋರಿದೆ. ಈ ಒಪ್ಪಂದಕ್ಕೆ ಒಪ್ಪಿಕೊಂಡವರು ಉದ್ಯೋಗಕ್ಕೆ ಸೇರಬಹುದು ಎಂದು ಕಂಪನಿಯು ಫ್ರೆಶರ್‌ಗಳಿಗೆ ಕಳುಹಿಸಿದ ಮೇಲ್‌ನಲ್ಲಿ ತಿಳಿಸಿದೆ. ಈ ವರ್ಷದ ಮಾರ್ಚ್‌ನಿಂದ ಅವರು ಕರ್ತವ್ಯಕ್ಕೆ ಸೇರಬೇಕಿದೆ. ಆದರೆ, ಈಗ ಆರಂಭದಲ್ಲಿ ಘೋಷಿಸಿದ್ದ ಸಂಬಳಕ್ಕಿಂತ ಅರ್ಧದಷ್ಟು ಸಂಬಳಕ್ಕೆ ಕೆಲಸ ಕೇಳುತ್ತಿದ್ದಾರೆ ಎಂದು ಐಟಿ ಉದ್ಯೋಗಿಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ಈ ನಿರ್ಧಾರ ತಪ್ಪು ”ವಿಪ್ರೋ ತೆಗೆದುಕೊಂಡಿರುವ ನಿರ್ಧಾರ ಅನ್ಯಾಯವಾದದ್ದು, ಇದು ಸ್ವೀಕಾರಾರ್ಹವಲ್ಲ. ನೌಕರರೊಂದಿಗೆ ಸಮಾಲೋಚಿಸಿ ಚರ್ಚಿಸದೆ ವೇತನ ಕಡಿತಗೊಳಿಸುವುದು ಸರಿಯಲ್ಲ. ಇದು ಪಾರದರ್ಶಕತೆ ಮತ್ತು ನಿಖರತೆಗೆ ವಿರುದ್ಧವಾಗಿದೆ. ಕಂಪನಿಯ ಆರ್ಥಿಕ ಸಮಸ್ಯೆಗಳನ್ನು ಸಂಪೂರ್ಣವಾಗಿ ಉದ್ಯೋಗಿಗಳ ಹೆಗಲ ಮೇಲೆ ಹಾಕುವುದು ಸರಿಯಲ್ಲ. ವಿಪ್ರೋ ಈ ನಿರ್ಧಾರವನ್ನು ಮರುಪರಿಶೀಲಿಸಿ ಕಂಪನಿ ತನ್ನ ನಿರ್ಧಾರ ಬದಲಿಸಬೇಕು,” ಎಂದು ಐಟಿ ನೌಕರರ ಸಂಘದ ಅಧ್ಯಕ್ಷ ಹರ್ ಪ್ರೀತ್ ಸಿಂಗ್ ಸಲೂಜಾ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!