ಶಾಂತಿಯ ತೋಟವಾಗಿದ್ದ ಸ್ವೀಡನ್‌ನಲ್ಲಿ ಕೋಮು ಗಲಭೆ, ಉದ್ರಿಕ್ತರಿಂದ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಂತಿಗೆ ಹೆಸರಾಗಿದ್ದ ಸ್ವೀಡನ್‌ನಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಧಾರ್ಮಿಕ ಗಲಭೆಗಳಿಂದ ಬೆಂಕಿಯ ಜ್ವಾಲೆ ಕುದಿಯುತ್ತಿದೆ. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಅನ್ನು ಸುಟ್ಟುಹಾಕಿ ಮತ್ತು ಅದರ ಮೇಲೆ “ಹಂದಿಯ ರಕ್ತ” ಹಚ್ಚುವಂತೆ ಸ್ವೀಡನ್‌ನ ರಾಜಕೀಯ ಪಕ್ಷ “ಸ್ಟ್ರೋಮ್ ಕುರ್ಸ್” ರಾಷ್ಟ್ರವ್ಯಾಪಿ ಕರೆ ನೀಡಿದೆ. ಸ್ಟ್ರೋಮ್ ಕುರ್ಜ್ ಪಕ್ಷದ ಸ್ಥಾಪಕ, ಡ್ಯಾನಿಶ್ ವಕೀಲ ರಾಸ್ಮಸ್ ಪಲುಡಾನ್, ಮುಸ್ಲಿಮರ ವಿರುದ್ಧ ಬೃಹತ್ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ.

ಸ್ವೀಡನ್ ನಲ್ಲಿ ಕುರಾನ್ ನಿಷೇಧಕ್ಕೆ ಕರೆ ನೀಡಿರುವುದು ಹಾಗೂ ಮುಸ್ಲಿಮರ ವಿರುದ್ಧ ದೇಶದ ಜನತೆಯ ಪ್ರತಿಭಟನೆಗಳು ಗಲಭೆಗೆ ಕಾರಣವಾಗಿವೆ. ರಾಸ್ಮಸ್‌ ಹೇಳಿಕೆಯಿಂದ ಉದ್ರಿಕ್ತಗೊಂಡ ಗುಂಪೊಂದು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ. ಕಾರು, ಟೈರ್‌ಗಳು ಮತ್ತು ಕಸದ ತೊಟ್ಟಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಘಟನೆಯಲ್ಲಿ ಮೂವರು ಸ್ವೀಡಿಷ್ ನಾಗರಿಕರು ಗಾಯಗೊಂಡಿದ್ದಾರೆ. ‘ಕುರಾನ್ ಅನ್ನು ಸುಟ್ಟು ಅದರ ಮೇಲೆ ಹಂದಿಗಳ ರಕ್ತವನ್ನು ಸುರಿಸಿ’ ಎಂಬ ರಾಸ್ಮಸ್ ಪಲುಡಾನ್ ಹೇಳಿಕೆಗೆ ಸ್ವೀಡನ್ ನ ಕೆಲವು ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ. ಸುಮಾರು 100 ಪ್ರತಿಭಟನಾಕಾರರು ಹಿಂಸಾಚಾರದಲ್ಲಿ ಭಾಗಿಯಾಗಿದ್ದರು. ಸ್ವೀಡಿಷ್ ರಾಜಧಾನಿ ಸ್ಟಾಕ್‌ಹೋಮ್ ಸೇರಿದಂತೆ ಇತರ ನಗರಗಳು ಮತ್ತು ಪಟ್ಟಣಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ನಡೆದವು. ಏತನ್ಮಧ್ಯೆ, ಕುರಾನ್ ಅನ್ನು ಸುಡುವ ಸಲುವಾಗಿ ಸ್ಟ್ರಾಮ್ ಕುರ್ಜ್ ಪಕ್ಷದ ನಾಯಕ ರಾಸ್ಮಸ್ ಮಾಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸ್ವೀಡನ್ ಇರಾಕ್‌ನಲ್ಲಿರುವ ಸ್ವೀಡಿಷ್ ರಾಯಭಾರಿಯನ್ನು ಕೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!