‘ವೈವಾಹಿಕ ಜೀವನದಲ್ಲಿ ಅಪಸ್ವರ, ನಂಬಿಕೆ ಹುಸಿಯಾಯ್ತು, ಯಾವತ್ತಿದ್ದರೂ ಅಪ್ಪು ಅಪ್ಪುನೇ..!’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯುವ ರಾಜಕುಮಾರ್ ಅವರ ವೈಯಕ್ತಿಕ ಜೀವನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಹಲವು ವರ್ಷಗಳಿಂದ ಯುವ ರಾಜಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಯುವ ಮತ್ತು ಶ್ರೀದೇವಿ ನಡುವೆ ಇದ್ದಕ್ಕಿದ್ದಂತೆ ಏನಾಯಿತು?

ದೊಡ್ಮನೆಯ ವಾರಸುದಾರರಾದ ಯುವ ರಾಜಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಹೆಸರು ಕೇಳಿ ಬಂದಿತ್ತು. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ನಂತರ ಅಭಿಮಾನಿಗಳು ಯುವ ರಾಜ್‌ಕುಮಾರ್ ಅಪ್ಪು ಅವರ ಹಾದಿಯಲ್ಲಿ ಸಾಗುತ್ತಿರುವುದನ್ನು ನೋಡಿದ್ದಾರೆ. ಯುವ ಸಿನಿಮಾ ಬಿಡುಗಡೆ ವೇಳೆ ಅಪ್ಪು ಅಭಿಮಾನಿಗಳು ಅಪಾರ ಬೆಂಬಲ ವ್ಯಕ್ತಪಡಿಸಿದ್ದರು. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ, ಯುವ ಅವರ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿದವು. ಸುಮಾರು ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಈಗ ಬೇರೆಯಾಗುತ್ತಿದ್ದಾರೆ.

ದೊಡ್ಮನೆಯ ಘನತೆ ಕಳೆದುಹೋಗಿದೆ. ಪಾರ್ವತಮ್ಮ ರಾಜ್‌ಕುಮಾರ್ ಇದ್ದಾಗ ಚಿತ್ರರಂಗದಲ್ಲಿ ಈ ರೀತಿ ಆಗಲು ಬಿಡುತ್ತಿರಲಿಲ್ಲ ಇನ್ನು ಮನೆಯಲ್ಲಿಯೇ ಹೀಗೆ ಆಗಿದೆ ಅಂದ್ರೆ ಸುಮ್ಮನೆ ಇರುತ್ತಾರಾ? ಹೆಣ್ಣು ಮಕ್ಕಳಿಗೆ ಎಂದೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಮುಂದೆ ಅಪ್ಪು ಸ್ಥಾನದಲ್ಲಿ ಯಾರನ್ನೂ ನೋಡುವುದಿಲ್ಲ ನಮ್ಮ ಭಾವನೆಗಳಿಗೆ ನೋವು ಉಂಟು ಮಾಡಬೇಡಿ. ಅಪ್ಪು ಅಪ್ಪುನೇ ಎಂದು ನೆಟ್ಟಿಗರು ಪೋಸ್ಟ್ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!