ಅತಂತ್ರ ವಿಧಾನಸಭೆ ಸುಳಿವು, ಜೆಡಿಎಸ್ ಕಡೆ ಎಲ್ಲರ ಕಣ್ಣು, ಏನ್ ಮಾಡ್ತಾರೆ ಎಚ್‌ಡಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದು, ನಾಳೆ ರಾಜ್ಯದ ರಾಜಕೀಯದ ಭವಿಷ್ಯ ಪ್ರಕಟವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಕಾಂಗ್ರೆಸ್‌ಗೆ ಗೆಲುವು ಎನ್ನುತ್ತಿವೆ, ಕೆಲ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಲಾಗಿದೆ.

ಇವು ಸಮೀಕ್ಷೆಗಳಷ್ಟೆ, ಅಸಲಿ ಫಲಿತಾಂಶ ನಾಳೆ ತಿಳಿಯಲಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ 113 ರ ಮ್ಯಾಜಿಕ್ ಸಂಖ್ಯೆ ತಲುಪಲು ಸಾಧ್ಯವಾಗದಿದ್ದಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ.

ಅತಂತ್ರ ವಿಧಾನಸಭೆ ಎದುರಾಗಿದ್ದೇ ಆದರೆ ಯಾವ ಪಕ್ಷವಾಗಲಿ ಜೆಡಿಎಸ್ ಷರತ್ತನ್ನು ಒಪ್ಪಿ ಮೈತ್ರಿ ಸರ್ಕಾರ ರಚಿಸಬೇಕಿದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ರಿಲ್ಯಾಕ್ಸ್ ಮೂಡ್‌ಗೆ ಜಾರಿರುವ ಎಚ್‌ಡಿಕೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ.

ನಾವು ಈಗಾಗಲೇ ನಿರ್ಧಾರ ಮಾಡಿದ್ದಾಗಿದೆ, ಯಾವ ಪಕ್ಷ ನಮ್ಮ ಷರತ್ತುಗಳನ್ನು ಒಪ್ಪುತ್ತದೆಯೋ ಅವರಿಗೆ ನಮ್ಮ ಬೆಂಬಲ ಇರಲಿದೆ. ಈ ಬಾರಿ ನಮ್ಮ ಪಕ್ಷವೂ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ. ಸೂಕ್ತ ಸಮಯ ಬಂದಾಗ ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಪ್ರಕಟ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!