ರಾಜಸ್ಥಾನದಲ್ಲಿ ತಡೆಯಲಾರದ ರಣಬಿಸಿಲು: 3,622 ಮಂದಿಗೆ ಹೀಟ್‌ ಸ್ಟ್ರೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಸ್ಥಾನದಲ್ಲಿ ಹೀಟ್ ಸ್ಟ್ರೋಕ್‍ನಿಂದ ಬಳಲುತ್ತಿರುವವರ ಸಂಖ್ಯೆ ಸೋಮವಾರ 2,809 ರಿಂದ 3,622ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ತೀವ್ರವಾದ ಶಾಖದ ಅಲೆಯ  ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರ  ರಾಜ್ಯದ ಫಲೋಡಿಯಲ್ಲಿ 49.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯಕ್ಕಿಂತ 6.3 ಡಿಗ್ರಿ ಹೆಚ್ಚಳವಾಗಿದೆ. ಜೈಪುರದಲ್ಲಿ  ಗರಿಷ್ಠ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಭಾನುವಾರಕ್ಕಿಂತ 0.8 ಡಿಗ್ರಿ ಹೆಚ್ಚಾಗಿದೆ. ಕೋಟಾದಲ್ಲಿ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಹೀಟ್‌ ಸ್ಟ್ರೋಕ್‌ ಲಕ್ಷಣಗಳೇನು?

ಚರ್ಮ ಕೆಂಪಾಗುವುದು
ಕಣ್ಣು ಡ್ರೈ ಆಗುವುದು
ತಲೆ ತಿರುಗುವುದು
ದೇಹದ ಉಷ್ಣಾಂಶ ಏರಿಕೆಯಾಗುವುದು
ವಾಕರಿಕೆ, ವಾಂತಿ
ತಲೆನೋವು
ದೇಹವಿಡೀ ನಡುಗುವುದು

ತಡೆಯುವುದು ಹೇಗೆ?
ಲೂಸ್‌ ಆದ ಕಾಟನ್‌ ಬಟ್ಟೆ ಧರಿಸಿ
ದೊಡ್ಡನೆಯ ಹ್ಯಾಟ್‌ ಧರಿಸಿ
ಆದಷ್ಟು ಮನೆಯಲ್ಲೇ ಇರಿ
ಸನ್‌ಸ್ಕ್ರೀನ್‌ ಬಳಕೆ ಮಾಡಿ
ಮದ್ಯಪಾನದಿಂದ ದೂರ ಇರಿ
ಸದಾ ನೀರು ಕುಡಿಯಬೇಕು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!